Select Your Language

Notifications

webdunia
webdunia
webdunia
webdunia

ಒಲಿಂಪಿಕ್ ಜ್ಯೋತಿ ಸಮಾರಂಭದಲ್ಲಿ ಗುಂಡಿಗೆ ಬಲಿಯಾದ ಚಿರತೆ

ಒಲಿಂಪಿಕ್ ಜ್ಯೋತಿ ಸಮಾರಂಭದಲ್ಲಿ ಗುಂಡಿಗೆ ಬಲಿಯಾದ ಚಿರತೆ
ಆವೊ ಪಾಲೊ , ಗುರುವಾರ, 23 ಜೂನ್ 2016 (16:49 IST)
ಒಲಿಂಪಿಕ್ ಜ್ಯೋತಿ ರಿಲೆ ಸಮಾರಂಭದಲ್ಲಿ ಬಳಸಿದ ಜಾಗ್ವಾರ್ ಚಿರತೆ ಸರಪಳಿಯಿಂದ ಬಿಡಿಸಿಕೊಂಡು ಸೈನಿಕನೊಬ್ಬನ ಮೇಲೆ ಆಕ್ರಮಣಕ್ಕೆ ಯತ್ನಿಸಿದಾಗ ಬ್ರೆಜಿಲಿಯನ್ ಸೇನೆ ಚಿರತೆಗೆ ಗುಂಡಿಕ್ಕಿ ಸಾಯಿಸಿದ ಹೃದಯವಿದ್ರಾವಕ ಘಟನೆ ಸಂಭವಿಸಿದೆ.  ಮನೌಸ್‌ನ ಜಂಗಲ್ ವಾರ್‌ಫೇರ್ ಇನ್‌ಸ್ಟ್ರಕ್ಷನ್ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಚಿರತೆ ಜೂಮಾನನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
 
ಒಲಿಂಪಿಕ್ ಜ್ಯೋತಿಯು ಬ್ರೆಜಿಲ್‌ನಾದ್ಯಂತ ಪ್ರವಾಸ ಮಾಡುತ್ತಿದ್ದು, ಜೂಮಾ ಜನರ ಮಧ್ಯೆ ವಾಸ ಮಾಡುವ ಅಭ್ಯಾಸವಿತ್ತು. ಸಮಾರಂಭ ಮುಗಿದ ಕೂಡಲೇ ಒಲಿಂಪಿಕ್ ಜ್ಯೋತಿಯಲ್ಲಿ ಉರಿಯುವ ಬೆಂಕಿಯಿಂದ ಹೆದರಿದ ಜೂಮಾ ಸರಪಳಿಯಿಂದ ತಪ್ಪಿಸಿಕೊಂಡು ಕೇಂದ್ರವು ನಿರ್ವಹಿಸುತ್ತಿದ್ದ ಜೂಗೆ ಪರಾರಿಯಾಗಿತ್ತು.
 
ಚಿರತೆಯನ್ನು ಮರುಸೆರೆಹಿಡಿಯಲು ಯತ್ನಿಸಿದಾಗ ಅದು ಸೈನಿಕನ ಮೇಲೆ ದಾಳಿಗೆ ಯತ್ನಿಸಿತು. ಅದಕ್ಕೆ ಅರಿವಳಿಕೆ ಚುಚ್ಚು ಮದ್ದು ನೀಡಿದರೂ ಪ್ರಯೋಜನವಾಗದೇ ಚಿರತೆ ತಲೆಗೆ ಪಿಸ್ತೂಲಿನಿಂದ ಗುಂಡಿಕ್ಕಿ ಸಾಯಿಸಲಾಯಿತು.
 
 ನಾವು ಒಲಿಂಪಿಕ್ ಜ್ಯೋತಿಯನ್ನು ಸರಪಳಿಯಲ್ಲಿರುವ ವನ್ಯಜೀವಿಯ ಮುಂದೆ ಪ್ರದರ್ಶಿಸಲು ಅವಕಾಶ ನೀಡಿದ್ದು ತಪ್ಪು. ನಮ್ಮ ನಂಬಿಕೆ ಮತ್ತು ಮೌಲ್ಯಗಳಿಗೆ ಈ ದೃಶ್ಯ ವಿರುದ್ಧವಾಗಿದೆ ಎಂದು ಸ್ಥಳೀಯ ಒಲಿಂಪಿಕ್ ಸಂಘಟನಾ ಸಮಿತಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಕ್ರಿಕೆಟ್ ಕೋಚ್ ಆಗಿ ಕರ್ನಾಟಕದ ಅನಿಲ್ ಕುಂಬ್ಳೆ ನೇಮಕ ಸಾಧ್ಯತೆ