Select Your Language

Notifications

webdunia
webdunia
webdunia
webdunia

ರಾಷ್ಟ್ರೀಯ ದಾಖಲೆ ಸಾಧಿಸಿದ ಮೆಮನ್‌‌‌‌

ರಾಷ್ಟ್ರೀಯ ದಾಖಲೆ ಸಾಧಿಸಿದ ಮೆಮನ್‌‌‌‌
ಪಣಜಿ , ಮಂಗಳವಾರ, 22 ಏಪ್ರಿಲ್ 2014 (16:11 IST)
11ನೇ ರಾಷ್ಟ್ರೀಯ ಯುವ ಅಥ್ಲೆಟಿಕ್‌‌‌‌ ಚಾಂಪಿಯನ್‌‌‌ಶಿಪ್‌‌ನಲ್ಲಿ ಕೇರಳದ ಮೆಮನ್‌ ಪಾವುಲೊಜ್‌‌‌ 110 ಮೀಟರ್‌ ಓಟದಲ್ಲಿ ಕೇವಲ 14.03 ಸೆಕೆಂಡ್‌‌ನಲ್ಲಿ ತಮ್ಮ ಗುರಿಯನ್ನು ತಲುಪಿ ಯುವ ವಿಭಾಗದಲ್ಲಿ ಹೊಸ ದಾಖಲೆ ಮಾಡಿದ್ದಾರೆ. 
 
ಬಂಗಾಲದ ದೆಬಾಜರುನ್‌ ಮುರುಮುರವರು 14.25 ಸೆಕೆಂಡ್‌‌ನಲ್ಲಿ ಗುರಿಯನ್ನು ಸಾಧಿಸಿ ಎರಡನೇ ಸ್ಥಾದಲ್ಲಿದ್ದಾರೆ. ಮಹಾರಾಷ್ಟ್ರದ ಸಭಾ ಭಗತ್‌ ಕಳೆದ ವರ್ಷ ರಾಷ್ಟ್ರೀಯ ರಿಕಾರ್ಡ ( 14.6) ನಲ್ಲಿ ಗುರಿಯನ್ನು ತಲುಪಿ ಮೊದಲ ಸ್ಥಾನದಲ್ಲಿದ್ದರು. 
 
ಮಹಿಳಾ ವಿಭಾಗದಲ್ಲಿ ಮಹಾರಾಷ್ಟ್ರದ ಅಂಕಿತಾ ಗೊಸವಿ 100 ಮೀಟರ್‌ ಓಟದಲ್ಲಿ 14.47 ಸೆಕೆಂಡ್‌‌ನಲ್ಲಿ ಮೊದಲ ಸ್ಥಾನಕ್ಕೆ ತಲುಪಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ದೆಹಲಿಯ ಶಿವಾಂಗ ರಾವತ್‌‌ ಎರಡನೇ ಸ್ಥಾನದಲ್ಲಿದ್ದಾರೆ. ಮಧ್ಯಪ್ರದೇಶದ ರೆಖಾ ಹೈಮರ್‌ ಥ್ರೋದಲ್ಲಿ 46.30 ಮೀಟರ್‌‌ ದಲ್ಲಿ ಎಸೆದು ಹೊಸ ದಾಖಲೆ ಮಾಡಿದ್ದಾರೆ. 
 
ಹುಡುಗರ ಹೈಮರ್‌ ಥ್ರೋದಲ್ಲಿ ರಾಜಸ್ಥಾನದ ಪ್ರದೀಪ ಕುಮಾರ್ (67.63 ಮೀಟರ್‌‌) ದಾಖಲೆ ಮಾಡುವುದರ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ದೆಹಲಿಯ ನವೀನ ಹುಡುಗರ ವಿಭಾಗದಲ್ಲಿ 10000ಮೀಟರ್‌ ನಡುಗೆಯ ಸ್ಪರ್ದೆಯಲ್ಲಿ ಸ್ವರ್ಣ ಪದಕ ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದು ಕ್ರೀಡಾ ಮೂಲಗಳು ತಿಳಿಸಿವೆ.

Share this Story:

Follow Webdunia kannada