Select Your Language

Notifications

webdunia
webdunia
webdunia
webdunia

ಬಟ್ಟೆ ಬಿಚ್ಚಿ ಅರೆನಗ್ನರಾದ ಮಂಗೋಲಿಯಾ ಕೋಚ್‌ಗಳು

ಬಟ್ಟೆ ಬಿಚ್ಚಿ ಅರೆನಗ್ನರಾದ ಮಂಗೋಲಿಯಾ ಕೋಚ್‌ಗಳು
ರಿಯೊ ಡಿ ಜನೈರೊ , ಮಂಗಳವಾರ, 23 ಆಗಸ್ಟ್ 2016 (18:50 IST)
ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ನಡೆದ ಘಟನೆ ಕೆಲವು ಪ್ರೇಕ್ಷಕರಿಗೆ ವಿಚಿತ್ರವಾಗಿ ಕಂಡುಬಂತು. ಮಂಗೋಲಿಯಾದ ಇಬ್ಬರು ಕುಸ್ತಿ ಕೋಚ್‌‍ಗಳು ಅರೆನಗ್ನ ಪ್ರದರ್ಶನ ಮಾಡಿದಾಗ ಪ್ರೇಕ್ಷಕರು ಬಿಟ್ಟ ಕಣ್ಣು ಬಿಟ್ಟಂತೆ ನೋಡಿದರು. ಆದರೆ ಮಂಗೋಲಿಯಾದಲ್ಲಿ ಕೋಚ್‌ಗಳ ವರ್ತನೆಯನ್ನು ಕೆಟ್ಟ ರೆಫರಿ ವ್ಯವಸ್ಥೆಗೆ ಸೂಕ್ತ ಪ್ರತಿಕ್ರಿಯೆ ಎಂದು ಶ್ಲಾಘಿಸಿದರು.

65 ಕೆಜಿ ಫ್ರೀಸ್ಟೈಲ್ ಕಂಚಿನ ಪದಕ ಪಂದ್ಯದಲ್ಲಿ ಮಂಗೋಲಿಯಾದ ಮಂದಕನಾರನ್ ಗ್ಯಾಂಜೋರಿಗ್ ವಿರುದ್ಧ ಉಜ್ಬೇಕಿಸ್ತಾನದ ಇಕ್ತಿಯೋರ್ ನವ್ರಜೋವ್ ಅವರನ್ನು ವಿಜಯಿ ಎಂದು ಘೋಷಿಸಿದಾಗ ಮಂಗೋಲಿಯಾದ ಮಾಧ್ಯಮ ಮತ್ತು ಸಾರ್ವಜನಿಕರು ಸಿಡಿದೆದ್ದರು.
 
ಇಕ್ತಿಯೋರ್ ಅವರನ್ನು ರೆಫರಿ ವಿಜಯಿಯೆಂದು ಘೋಷಿಸಿದಾಗ ವಿಜಯೋತ್ಸವದ ಸಂಭ್ರಮದಲ್ಲಿದ್ದ ಗಾಂಜೋರಿಗ್ ಕುಸಿದು ಕುಳಿತರು. ಆದರೆ ಅವರ ಕೋಚ್‌ಗಳು ಮಾತ್ರ ಅದಕ್ಕೂ ಹೆಚ್ಚಿನ ನಿರಾಶೆಯನ್ನು ತಮ್ಮ ಬಟ್ಟೆಗಳನ್ನು ಬಿಚ್ಚುವ ಮೂಲಕ ತೋರಿಸಿದರು.
 
 ಕೋಚ್ ಬಾಯಾರಾ ಶೂಗಳು ಮತ್ತು ಶರ್ಟ್ ಬಿಚ್ಚಿ ಅಧಿಕಾರಿಗಳ ಎದುರೇ ಹತಾಶೆಯಿಂದ ಮ್ಯಾಟ್ ಮೇಲೆ ಎಸೆದರು. ಸೋಸ್ತ್‌ಬಯಾರ್ ಕೂಡ ತನ್ನ ಬಟ್ಟೆಗಳನ್ನು ಬಿಚ್ಚಿದಾಗ ನೀಲಿ ಚೆಡ್ಡಿ ಮಾತ್ರ ಉಳಿದಿತ್ತು. ಬ್ರೆಜಿಲ್ ಗುಂಪು ಕೂಡ ಮಂಗೋಲಿಯಾ, ಮಂಗೋಲಿಯಾ ಘೋಷಣೆ ಕೂಗಿದವು.
 
ರೆಫರಿಗಳು ನರ್ವುಜಾವ್‌ಗೆ ಪೆನಾಲ್ಟಿ ಪಾಯಿಂಟ್ ನೀಡುವ ಬದಲಿಗೆ ಮಂದಕ್ನರಾನ್‌ಗೆ ಎಚ್ಚರಿಕೆ ನೀಡಬೇಕಿತ್ತು ಎಂದು ಮಾಜಿ ಫ್ರೀಸ್ಟೈಲ್ ಕುಸ್ತಿಪಟು ನ್ಯಾಮಜಾವ್ ಬಸಂಜಾವ್ ಅಭಿಪ್ರಾಯಪಟ್ಟರು. ಗ್ಯಾಂಜೊರಿಗ್ ಉತ್ತಮ ಕುಸ್ತಿಪಟು ಎನ್ನುವುದು ವಿಡಿಯೊ ರೆಕಾರ್ಡಿಂಗ್‌ನಲ್ಲಿ ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ ಎಂದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಿಯೊದಿಂದ ಹಿಂತಿರುಗಿದ ಸುಧಾ ಸಿಂಗ್‌ ಆಸ್ಪತ್ರೆಗೆ: ಝೀಕಾ ವೈರಸ್ ಸೋಂಕಿನ ಶಂಕೆ