Select Your Language

Notifications

webdunia
webdunia
webdunia
webdunia

ಫುಟ್ಬಾಲ್ ಕೋಚ್ ಅಮಲ್ ದತ್ತಾಗೆ ಅಂತಿಮ ನಮನ

ಫುಟ್ಬಾಲ್ ಕೋಚ್ ಅಮಲ್ ದತ್ತಾಗೆ ಅಂತಿಮ ನಮನ
ಕೋಲ್ಕತಾ: , ಸೋಮವಾರ, 11 ಜುಲೈ 2016 (19:59 IST)
ದೇಶದ ಪ್ರಥಮ ವೃತ್ತಿಪರ ಪೂರ್ಣಕಾಲಿಕ ಫುಟ್ಬಾಲ್ ಕೋಚ್ ಅಮಲ್ ದತ್ತಾ ಅವರ ಪಾರ್ಥಿವ ಶರೀರವನ್ನು ಪೂರ್ಣ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಫುಟ್ಬಾಲ್ ಪ್ರೇಮಿಗಳು ಹರಿದುಬಂದು ಅಮಲ್ ದತ್ತಾಗೆ ಅಂತಿಮ ನಮನ ಸಲ್ಲಿಸಿದರು. ಕೋಚ್ ಆಗಿ 1990ರ ದಶಕದಲ್ಲಿ ಪ್ರೇಕ್ಷಕರನ್ನು ಪುಳಕಗೊಳಿಸಲು ದತ್ತಾ ಡೈಮಂಡ್ ಸಿಸ್ಟಮ್ ಜಾರಿಗೆ ತಂದಿದ್ದರು.  ಫುಟ್ಬಾಲ್ ಕೋಚಿಂಗ್‌ನಲ್ಲಿ ಲೆಜೆಂಡ್ ಆಗಿರುವ ಅಮಲ್ ದತ್ತಾ ನಿಧನ ತುಂಬಲಾಗದ ನಷ್ಟ. ಅವರು ಬಂಗಾಳದ ಹೆಮ್ಮೆಯಾಗಿದ್ದಾರೆ ಎಂದು ಬ್ಯಾನರ್ಜಿ ಪ್ರಕಟಿಸಿದರು.
 
ಇಲ್ಲಿನ ರವೀಂದ್ರ ಸದನದಲ್ಲಿ ದತ್ತಾ ಅವರಿಗೆ ಬ್ಯಾನರ್ಜಿ, ರಾಜ್ಯ ಸಚಿವರು ಮತ್ತು ಮಾಜಿ ಮತ್ತು ಹಾಲಿ ಫುಟ್ಬಾಲ್ ಆಟಗಾರರು ಅಂತಿಮ ನಮನ ಸಲ್ಲಿಸಿದರು.
 
ತಮ್ಮ ಆಟದ ದಿನಗಳಲ್ಲಿ ಮಿಡ್‌ಫೀಲ್ಡರ್ ಆಗಿದ್ದ ದತ್ತಾ  1954ರ ಮನಿಲಾದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಬಳಿಕ ಇಂಗ್ಲೆಂಡ್‌ಗೆ ತೆರಳಿ ಒಂದು ವರ್ಷದ ಎಫ್‌ಎ ಕೋಚಿಂಗ್ ಕೋರ್ಸ್‌ ಪೂರೈಸಿದರು.
 
ಅನೇಕ ಕ್ರೀಡಾಪಟುಗಳು ಜೀವನದ ಸ್ಥಿರತೆಗಾಗಿ ಸರ್ಕಾರಿ ನೌಕರಿ ಆಶಿಸಿದರೆ ದತ್ತಾ ಪ್ರವಾಹದ ವಿರುದ್ಧ ಈಜಿ ರೈಲ್ವೆ ಹುದ್ದೆ ತೊರೆದು ಫುಟ್ಬಾಲ್ ಮೇಲಿನ ಪ್ರೇಮದಿಂದ ಪೂರ್ಣಕಾಲಿಕ ವೃತ್ತಿಪರ ಕೋಚಿಂಗ್ ವೃತ್ತಿಜೀವನಕ್ಕೆ ಮೊರೆಹೋಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಮೀರ್ ನಮ್ಮ ಕುಟುಂಬದ ಭಾಗ, ನಾವು ಅವರನ್ನು ಬೆಂಬಲಿಸಿದ್ದೇವೆ: ವಾಹಬ್