Select Your Language

Notifications

webdunia
webdunia
webdunia
webdunia

ಆನಂದ್ ವಿರುದ್ಧ ಆಟದುದ್ದಕ್ಕೂ ನಿದ್ರೆಯ ಗುಂಗಿನಲ್ಲಿ ಕಾರ್ಲ್‌ಸನ್

ಆನಂದ್ ವಿರುದ್ಧ ಆಟದುದ್ದಕ್ಕೂ ನಿದ್ರೆಯ ಗುಂಗಿನಲ್ಲಿ ಕಾರ್ಲ್‌ಸನ್
ಸೋಚಿ , ಬುಧವಾರ, 19 ನವೆಂಬರ್ 2014 (18:55 IST)
ರಷ್ಯಾ ಸೋಚಿಯಲ್ಲಿ ನಡೆಯುತ್ತಿರುವ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ವಿಶ್ವನಾಥನ್ ಆನಂದ್ ವಿರುದ್ದ 8ನೇ ಪಂದ್ಯದಲ್ಲಿ ಡ್ರಾ ಮಾಡಿಕೊಂಡು ಒಂದು ಪಾಯಿಂಟ್ ಮುನ್ನಡೆಯನ್ನು ಉಳಿಸಿಕೊಂಡಿದ್ದಾರೆ.

ಆದರೆ ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲಿ  ಅವರು ತೂಕಡಿಸುತ್ತಿರುವ ಚಿತ್ರ ಪ್ರಕಟವಾಗಿ ಸಂಚಲನ ಉಂಟುಮಾಡಿದೆ.ಆರೂವರೆಗಂಟೆಗಳ ಕಾಲ ನಡೆದ ಏಳನೇ ಆಟದಲ್ಲಿ  ಡ್ರಾ ಮಾಡಿಕೊಂಡಿದ್ದ ಕಾರ್ಲ್‌ಸನ್ ಮತ್ತು ಆನಂದ್ ಆಟ ಮಂಗಳವಾರ 41 ನಡೆಗಳಿಗೆ ಮುಕ್ತಾಯವಾಯಿತು.

ಕಾರ್ಲ್‌ಸನ್ 12 ಆಟಗಳ ಪಂದ್ಯದಲ್ಲಿ 4.5-3.5ರಿಂದ ಮುನ್ನಡೆ ಸಾಧಿಸಿದ್ದಾರೆ.  ಟ್ವಿಟರ್‌ನಲ್ಲಿ ಕಾರ್ಲ್‌ಸನ್   ಬಗ್ಗೆ ಅನೇಕ ಪ್ರಶ್ನೆಗಳು ಹರಿದಾಡುತ್ತಿದ್ದು, ಆಟದುದ್ದಕ್ಕೂ ನಿದ್ರೆಯ ಗುಂಗಿನಲ್ಲಿದ್ದು, ಕೆಲವು ಬಾರಿ ತೂಕಡಿಸುತ್ತಿದ್ದರು.

Share this Story:

Follow Webdunia kannada