Webdunia - Bharat's app for daily news and videos

Install App

ಮೆಸ್ಸಿ ಸಹೋದರನ ಮೇಲೆ ಹಲ್ಲೆ ನಡೆಸಿದ ಚಿಲಿ ಅಭಿಮಾನಿಗಳು

Webdunia
ಭಾನುವಾರ, 5 ಜುಲೈ 2015 (16:29 IST)
ಕೋಪಾ ಅಮೆರಿಕ ಪುಟ್ಬಾಲ್ ಅಂತಿಮ ಕದನದ ನಡುವೆ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿಯ ಕುಟುಂಬದ ಮೇಲೆ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ. 
 
ಅರ್ಜೆಂಟೀನಾ ಮತ್ತು ಚಿಲಿ ತಂಡಗಳ ನಡುವೆ ನಡೆಯುತ್ತಿದ್ದ ಅಂತಿಮ ಪಂದ್ಯದ ವೇಳೆ ಈ ದುರ್ಘಟನೆ ನಡೆದಿದೆ.
 
ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಮೆಸ್ಸಿ ಕುಟುಂಬದವರನ್ನು ಏಕಾಏಕಿ ಎದುರಾಳಿ ಚಿಲಿ ತಂಡದ ಅಭಿಮಾನಿಗಳು ಹೀಯಾಳಿಸಲು ಆರಂಭಿಸಿದ್ದಾರೆ. ತಮ್ಮ ತಂಡದ ವಿರುದ್ಧವಾಗಿ ಆಡುತ್ತಿದ್ದ ಅರ್ಜೇಂಟೀನಾ ತಂಡದ ನಾಯಕ ಮೆಸ್ಸಿ ಅವರ ಮುಂದುವರೆದ ಕಳಪೆ ಪ್ರದರ್ಶನಕ್ಕೆ ಚಿಲಿ ತಂಡದ ಅಭಿಮಾನಿಗಳು ಅಣಕವಾಡಿದ್ದಾರೆ. ಇದಕ್ಕೆ ಮೆಸ್ಸಿ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದಾಗ ಅಭಿಮಾನಿಗಳು ಹೀಯಾಳಿಸಲು ಆರಂಭಿಸಿದರು ಮತ್ತು ಅವರಲೊಬ್ಬ ಮೆಸ್ಸಿ ಅವರ ಸಹೋದರ ರೋಡ್ರಿಗೋ(28) ಮೇಲೆ ಹಲ್ಲೆ ಮಾಡಿದ. ಸದ್ಯ ರೋಡ್ರಿಗೋ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹೆಚ್ಚಿನ ಅಪಾಯ ಸಂಭವಿಸುವ ಮೊದಲು ಭದ್ರತಾ ಸಿಬ್ಬಂದಿಗಳು ಮೆಸ್ಸಿ ಕುಟುಂಬವನ್ನು ಟೆಲಿವಿಷನ್ ಕ್ಯಾಬಿನ್‌ಗೆ ಕರೆದುಕೊಂಡು ಹೋದರು.
 
ಅರ್ಜೆಂಟೀನಾದ ಇನ್ನೊಬ್ಬ ಕ್ರೀಡಾಪಟು ಸೋರ್ಜಿಯೋ ಅಗ್ವೇರಾ ಅವರ ಕುಟುಂಬದ ಮೇಲೂ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
 
ಈ ಪಂದ್ಯದಲ್ಲಿ ಅರ್ಜೇಟೀಂನಾ ತಂಡವನ್ನು ಸೋಲಿಸಿದ ಚಿಲಿ ಕೋಪಾ ಅಮೆರಿಕ ಪುಟ್ಬಾಲ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments