Select Your Language

Notifications

webdunia
webdunia
webdunia
webdunia

98ನೇ ಜತೆಗಾರನ ಜತೆ 54ನೇ ಪ್ರಶಸ್ತಿ ಗೆದ್ದ ಲಿಯಾಂಡರ್

98ನೇ ಜತೆಗಾರನ ಜತೆ 54ನೇ ಪ್ರಶಸ್ತಿ ಗೆದ್ದ ಲಿಯಾಂಡರ್
ಕೌಲಾಲಂಪುರ , ಸೋಮವಾರ, 29 ಸೆಪ್ಟಂಬರ್ 2014 (10:10 IST)
ಭಾರತದ ಲಿಯಾಂಡರ್ ಪೇಸ್, ಪೋಲೆಂಡ್‌ನ ಮಾರ್ಸಿನ್ ಮಟ್ಕೋವ್ ಸ್ಕಿ ಜೊತೆಸೇರಿ ಮಲೇಷ್ಯನ್ ಓಪನ್ ಟೆನಿಸ್ ಟೂರ್ನಿಯ ಪುರುಷ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

ಪೇಸ್-ಮಾಸಿನ್ ಜೋಡಿ ಅಂತಿಮ ಪಂದ್ಯದಲ್ಲಿ ಬ್ರಿಟನ್‌ನ ಜಿಮ್ಮಿ ಮರ್ರೆ ಮತ್ತು ಆಸ್ಟ್ರೇಲಿಯಾದ ಜಾನ್ ಪೀರ್ಸ್ ಜೋಡಿಯನ್ನು 3-6, 7-6, 10-5 ನೇರ ಸೆಟ್‌ಗಳಿಂದ ಸೋಲಿಸಿತು.  ಇದೇ ಮೊದಲ ಬಾರಿ ಮಾರ್ಸಿನ್ ಜೊತೆ ಲಿಯಾಂಡರ್ ಪೇಸ್ ಕಣಕ್ಕಿಳಿದಿದ್ದರು. ಬೆನ್ನುನೋವಿನ ಸಮಸ್ಯೆಯಿಂದಾಗಿ ಪೇಸ್ ಎಂದಿನ ಜತೆಗಾರ ರಾಡೆಕ್ ಸ್ಪೆಪಾನೆಕ್ ವಿಶ್ರಾಂತಿಯಲ್ಲಿದ್ದಾರೆ. ಪೇಸ್‌ಗೆ ಮಾರ್ಸಿನ್, ವೃತ್ತಿ ಜೀವನದ 98ನೇ ಡಬಲ್ಸ್ ಜತೆಗಾರರೆನಿಸಿದರು.
 
ನಲವತ್ತೊಂದರ ಹರೆಯದ ಪೇಸ್‌ಗೆ ಇದು ವೃತ್ತಿ ಜೀವನದ 54ನೇ ಎಟಿಪಿ ಟೂರ್ ಡಬಲ್ಸ್ ಪ್ರಶಸ್ತಿಯಾಗಿದೆ.  1997 ರಿಂದ ಸತತವಾಗಿ 18 ವರ್ಷಗಳ ಕಾಲ ವರ್ಷಕ್ಕೆ ಕನಿಷ್ಠ ಒಂದಾದರೂ ಪ್ರಶಸ್ತಿ ಗೆದ್ದ ದಾಖಲೆಯನ್ನವರು ಬರೆದಿದ್ದಾರೆ. ಪಂದ್ಯದ ಆರಂಭದಲ್ಲಿ ನಾವು ಉತ್ತಮ ಆಟ ಪ್ರದರ್ಶಿಸಲಿಲ್ಲ. ಆದರೆ ನಮ್ಮಲ್ಲಿರುವ ಆತ್ಮವಿಶ್ವಾಸ ಮಾತ್ರ ಕುಂದಿರಲಿಲ್ಲ. ಹೀಗಾಗಿ ನಮಗೆ ಗೆಲುವು ಸಾಧಿಸುವುದು ಸಾಧ್ಯವಾಯಿತು ಎಂದು ಪೇಸ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಅವರು ಸಂತೋಷವನ್ನು ಹಂಚಿಕೊಂಡರು.

Share this Story:

Follow Webdunia kannada