Webdunia - Bharat's app for daily news and videos

Install App

ಶರಪೋವಾಗೆ ಫೇಸ್‌‌ಬುಕ್‌‌ನಲ್ಲಿ ಬೈಗುಳಗಳ ಸುರಿಮಳೆ

Webdunia
ಶುಕ್ರವಾರ, 4 ಜುಲೈ 2014 (18:32 IST)
ಮೊನ್ನೆಯಷ್ಟೆ ಮಾರಿಯಾ ಶರಪೋವಾರ ಪಂದ್ಯ ವೀಕ್ಷಿಸಲು ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌‌ ತೆರಳಿದ್ದರು ಆಗ ಮಾರಿಯಾ ಶರಪೋವಾ, ಸಚಿನ್‌ ಯಾರು ಎಂದು ತನಗೆ ಗೊತ್ತಿಲ್ಲ ಎಂದು ತಿಳಿದಿದ್ದರು. ಈ ಕುರಿತು ಭಾರತೀಯರು ಕೋಪಗೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಶರಫೋವಾ ವಿರುದ್ದ ಕಿಡಿಕಾರುತ್ತಿದ್ದಾರೆ. ಶರಪೋವಾಗೆ ಕುರಿತ ಜೊಕ್ಸ್‌‌ಗಳನ್ನು ಶೇರ್‌ ಮಾಡುತ್ತಿದ್ದಾರೆ. ಶರಪೋವಾರ ಫೇಸ್‌‌ಬುಕ್‌‌ ಪೇಜ್‌ನಲ್ಲಿ ಸಿಟ್ಟಿನ ಸುರಿಮಳೆ ಸುರಿಸುತ್ತಿದ್ದಾರೆ. ಗುರುವಾರ ಮಧ್ಯಾನ್ಹದವರೆಗೂ ಟ್ವಿಟರ್‌‌‌‌‌ನ ಟಾಪ್‌‌‌ನಲ್ಲಿ ಇದೇ ರೀತಿಯ ಟೀಕೆಗಳು ವಿಜ್ರಂಭಿಸುತ್ತಿದ್ದವು. 
  
ಶರಪೋವಾರ ಫೇಸ್‌‌ಬುಕ್‌‌ ಪೇಜ್‌‌ನಲ್ಲಿ ಪ್ರತಿ ಪೋಸ್ಟ್‌ ಮೇಲೆ ಭಾರತೀಯರು ಆ ಸುದ್ದಿಯ ಲಿಂಕ್ಸ್‌ ಪೋಸ್ಟ್‌ ಮಾಡುತ್ತಿದ್ದಾರೆ. ಸಚಿನ್‌‌ಗೆ ಇಡೀ ವಿಶ್ವವೆ ಗುರುತಿಸುತ್ತದೆ ಎಂಬ ಲಿಂಕ್‌ ಪೋಸ್ಟ್‌ ಮಾಡುತ್ತಿದ್ದಾರೆ. ಕೆಲ ಜನರು ಶರಪೋವಾರ ಫೇಸ್‌ಬುಕ್ ಪೇಜ್‌‌ನಲ್ಲಿ ಬೈಗುಳಗಳನ್ನೂ ಕೂಡ ಪೋಸ್ಟ್‌ ಮಾಡುತ್ತಿದ್ದಾರೆ. 
 
ಸಚಿನ್‌ ಅಭಿಮಾನಿಗಳು ಒಂದರ ಹಿಂದೆ ಒಂದು ಟೀಕೆಗಳ ಸುರಿಮಳೇ ಸುರಿಸುತ್ತಿದ್ದಾರೆ. ಸಚಿನ್‌‌‌ರಲ್ಲಿ ಮೈಕಲ್‌‌‌ ಶೂಮಾಕರ್‌ರಿಂದ ರೋಜರ್‌ ಫೇಡರ್‌‌ ವರೆಗೆ ಗುರುತಿಸುತ್ತಾರೆ , ಇಂತಹದುರಲ್ಲಿ ಶರಪೋವಾ ಸಚಿನ್‌‌ರನ್ನು ಹೇಗೆ ಗುರುತಿಸುವುದಿಲ್ಲ. ಎಂದು ಭಾರತೀಯರ ಸಚಿನ್‌ ಅಭಿಮಾನಿಗಳ ಪ್ರಶ್ನೆಯಾಗಿದೆ. 
 
ಕೆಲ ಭಾರತೀಯರು ಶರಪೋವಾ ಪರವಾಗಿದ್ದಾರೆ.  
ಸಚಿನ್‌ ಅಭಿಮಾನಿಗಳು ಶರಪೋವಾರ ಮೇಲೆ ಸಿಟ್ಟಾಗಿದ್ದಾರೆ. ಈ ಕುರಿತು ಕೆಲವರು ಶರಪೋವಾರ ಪರವಾಗಿ ಕೂಡ ಮಾತನಾಡುತ್ತಿದ್ದಾರೆ. ಶರಪೋವಾ ರಷ್ಯಾದವರಾಗಿದ್ದಾರೆ. ಅಲ್ಲಿ ಕ್ರಿಕೆಟ್‌ ಆಟ ಅಷ್ಟೊಂದು ಜನಪ್ರೀಯವಿಲ್ಲ ಇದಕ್ಕಾಗಿ ಶರಪೋವಾ ಸಚಿನ್‌‌ರನ್ನು ಗುರುತಿಸಿರಲಿಕ್ಕಿಲ್ಲ ಎಂದು ಕೆಲವು ಹೇಳುತ್ತಿದ್ದಾರೆ. ಸಚಿನ್‌ ಬಗ್ಗೆ ತಿಳಿದುಕೊಳ್ಳುವುದು ಅಷ್ಟೊಂದು ಅವಶ್ಯಕತೆ ಇರಬೇಕೆಂಬುದು ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. 
 
ಅಷ್ಟಕ್ಕೂ ಶರಪೋವಾ ಹೇಳಿದ್ದೇನು? 
ನಿಮಗೆ ಗೊತ್ತಾ ಬ್ರಿಟಿಷ್‌ ಫುಟ್ಬಾಲರ್ ಡೆವಿಡ್ ಬೆಕಹಮ್‌ ಜೊತೆಗೆ ನಿಮ್ಮ ಪಂದ್ಯವನ್ನು ವಿಕ್ಷೀಸಲು ಭಾರತೀಯ ಕ್ರಿಕೆಟ್‌ ಆಟಗಾರ ಸಚಿನ್ ತೆಂಡೂಲ್ಕರ್‌ ಕೂಡ ಆಗಮಿಸಿದ್ದಾರೆ ಎಂದು ಮಾಧ್ಯಮದವರು ಕೇಳಿದ್ದರು. ಆಗ ಶರಪೋವಾ " ನನಗೆ ಡೆವಿಡ್‌ ಗೊತ್ತು ಆದರೆ ಸಚಿನ್‌ ತೆಂಡೂಲ್ಕರ್‌ ಯಾರು ಎಂದು ಗೊತ್ತಿಲ್ಲ " ಎಂದು ಹೇಳಿದ್ದರು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments