Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್: ಭಾರತಕ್ಕೆ ಕಬ್ಬಡ್ಡಿಯಲ್ಲಿ ಸ್ವರ್ಣ ಸಂಭ್ರಮ

ಏಷ್ಯನ್ ಗೇಮ್ಸ್: ಭಾರತಕ್ಕೆ ಕಬ್ಬಡ್ಡಿಯಲ್ಲಿ ಸ್ವರ್ಣ ಸಂಭ್ರಮ
ಇಂಚಾನ್‌ , ಶುಕ್ರವಾರ, 3 ಅಕ್ಟೋಬರ್ 2014 (10:35 IST)
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಮತ್ತು ಪುರುಷ ಕಬ್ಬಡ್ಡಿ ತಂಡಗಳೆರಡಕ್ಕೂ ಚಿನ್ನದ ಪದಕ ದೊರಕಿದೆ.ಕರ್ನಾಟಕದ  ಮಮತಾ ಪೂಜಾರಿ ನೇತೃತ್ವದ ಮಹಿಳಾ ತಂಡ ಇರಾನ್ ತಂಡವನ್ನು 31-21  ಅಂತರದಿಂದ ಮಣಿಸಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿತು. ಪುರುಷರ ತಂಡ ಕೂಡ ಇರಾನ್ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿತು. 

ತೀವೃ ಹಣಾಹಣಿಯಿಂದ ಕೂಡಿದ್ದ ರೋಮಾಂಚನಕಾರಿ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಭಾರತೀಯ ಮಹಿಳಾ ತಂಡ  31-21  ಅಂತರದಲ್ಲಿ ಗೆದ್ದರೆ, ಪುರುಷರ ತಂಡ 27-25 ಅಂತರದಲ್ಲಿ ಗೆಲುವು ದಾಖಲಿಸಿತು. 
 
ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆಯುತ್ತಿರುವ 17 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ತಂಡ ಗೆಲುವು ಸಾಧಿಸಿದ ತರುವಾಯ ಭಾರತ ಪುರುಷರ ಕಬ್ಬಡ್ಡಿ ತಂಡದಿಂದ ಕೂಡ ಚಿನ್ನವನ್ನು ನಿರೀಕ್ಷಿಸಲಾಗಿತ್ತು. ಆ ಭರವಸೆಯನ್ನು ಭಾರತೀಯ ಕಲಿಗಳು ಹುಸಿಗೊಳಿಸಲಿಲ್ಲ. 
 
ಪದಕ ಬೇಟೆಯಲ್ಲಿ ಭಾರತ 9ನೇ ಸ್ಥಾನದಲ್ಲಿದ್ದು, ಚೀನಾ ಪ್ರಥಮ ಸ್ಥಾನದಲ್ಲಿದೆ. ಈ ಪದಕದೊಂದಿಗೆ ಭಾರತ 11 ಚಿನ್ನದ ಪದಕಗಳನ್ನು ಗಳಿಸಿದಂತಾಗಿದೆ. ನಿನ್ನೆ ಕರ್ನಾಟಕದ ಪೂವಮ್ಮ 400 ಮೀಟರ್ ರೀಲೆಯಲ್ಲಿ ಸ್ವರ್ಣ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು. 

Share this Story:

Follow Webdunia kannada