Select Your Language

Notifications

webdunia
webdunia
webdunia
webdunia

ಸಿನಿಮೀಯ ರೀತಿಯಲ್ಲಿ ಭಾರತೀಯ ಶೂಟರ್ ಮೇಲೆ ರೇಪ್ ಮಾಡಿದ ಕೋಚ್

ಸಿನಿಮೀಯ ರೀತಿಯಲ್ಲಿ ಭಾರತೀಯ ಶೂಟರ್ ಮೇಲೆ ರೇಪ್ ಮಾಡಿದ ಕೋಚ್
NewDelhi , ಭಾನುವಾರ, 4 ಡಿಸೆಂಬರ್ 2016 (12:53 IST)
ನವದೆಹಲಿ: ಜನುಮ ದಿನದಂದೇ ತಂಪು ಪಾನೀಯದಲ್ಲಿ ಮತ್ತು ಬೆರೆಸಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ದೇಶೀಯ ಶೂಟಿಂಗ್ ಪಟುವೊಬ್ಬರು ತಮ್ಮ ಕೋಚ್ ಮೇಲೆ ಆರೋಪ ಮಾಡಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಮಹಿಳಾ ಶೂಟರ್ ದೆಹಲಿಯ ಚಾಣಕ್ಯಪುರಿಯಲ್ಲಿರುವ ತನ್ನ ಮನೆಯಲ್ಲಿ ನಡೆದ ಬರ್ತ್ ಡೇ ಪಾರ್ಟಿಗೆ ಆಗಮಿಸಿದ್ದ ಕೋಚ್ ತನಗೆ ಮತ್ತು ಬರಿಸುವ ಔಷಧ ಬೆರೆಸಿದ ಪಾನೀಯ ನೀಡಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿದ್ದಾಳೆ.

ಈ  ಸಂತ್ರಸ್ತ ಮಹಿಳೆ ದೇಶೀಯ ಮಟ್ಟದ ಮತ್ತು ಕೆಲವು ಅಂತಾರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಇದೇ ಕೋಚ್ ನೆರವಾಗಿದ್ದನೆಂದು ಹೇಳಲಾಗಿದೆ.  ಅಲ್ಲದೆ ತನ್ನ ಕೃತ್ಯವನ್ನು ಬಯಲು ಮಾಡಿದರೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆಂದು ಆಕೆ ಆರೋಪಿಸಿದ್ದಾಳೆ. ಈ ಬಗ್ಗೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ಹೇಳುವ ಮಾತೇ ಇದು?!