Webdunia - Bharat's app for daily news and videos

Install App

ಭಾರತದ ಫುಟ್ಬಾಲ್‌ ಪಟುಗಳು ಫಿಟ್ನೆಸ್‌ನಲ್ಲಿ ಐರೋಪ್ಯ ಆಟಗಾರರಿಗಿಂತ ಕಡಿಮೆಯಿಲ್ಲ

Webdunia
ಗುರುವಾರ, 14 ಜುಲೈ 2016 (17:56 IST)
ಫಿಟ್ನೆಸ್ ಮಟ್ಟಕ್ಕೆ ಸಂಬಂಧಿಸಿದಂತೆ, ಭಾರತದ ಫುಟ್ಬಾಲ್ ಆಟಗಾರರು ಐರೋಪ್ಯದ ಆಟಗಾರರಿಗಿಂತ ಕಡಿಮೆಯಿಲ್ಲ ಎಂದು ಎಫ್‌ಸಿ ಪುಣೆ ಸಿಟಿ ತಂಡದ ದೈಹಿಕ ಚಿಕಿತ್ಸಕ ಮೈಗೇಲ್ ಮಾರ್ಟಿನೆಜ್ ತಿಳಿಸಿದ್ದಾರೆ. ಇಂಡಿಯನ್ ಸೂಪರ್ ಲೀಗ್ ಫ್ರಾಂಚೈಸಿ ಆಟಗಾರರ ಫಿಟ್ನೆಸ್‌ ಪರೀಕ್ಷೆಗಳನ್ನು ಕೈಗೊಳ್ಳಲು ಅವರು ನಗರಕ್ಕೆ ಆಗಮಿಸಿದ್ದರು.

ಸ್ಪೇನ್ ದೈಹಿಕ ಚಿಕಿತ್ಸಕ ಭಾರತದ ಫುಟ್ಬಾಲ್ ಸನ್ನಿವೇಶಕ್ಕೆ ಹೊಸಬರಲ್ಲ.  ಕಳೆದ ಎರಡು ಸೀಸನ್‌ಗಳಲ್ಲಿ ಅಟ್ಲೆಟಿಕೊ ಡಿ ಕೋಲ್ಕತಾಗೆ ಕೆಲಸ ಮಾಡಿ ಮೂರನೇ ಸೀಸನ್‌ನಲ್ಲಿ ಹೆಡ್ ಕೋಚ್ ಆಂಟೊನಿಯೊ ಹಬಾಸ್ ಜತೆ  ಪುಣೆಗೆ ನೆಲೆ ಬದಲಿಸಿದ್ದಾರೆ. 
 
 ಎಟಿಕೆ ಜತೆ ಎರಡು ಸೀಸನ್‌ಗಳಲ್ಲಿ ಕಾರ್ಯನಿರ್ವಹಿಸಿದ ಬಳಿಕ, ಸ್ಥಳೀಯ ಆಟಗಾರರು ಫಿಟ್ನೆಸ್ ಮಟ್ಟದಲ್ಲಿ ಐರೋಪ್ಯ ಆಟಗಾರರಿಗಿಂತ ಕಡಿಮೆಯಿಲ್ಲ. ಅವರು ಅಂತಾರಾಷ್ಟ್ರೀಯ ಆಟಗಾರರಿಗೆ ಸಮನಾಗಿದ್ದು, ಮೈದಾನದಲ್ಲಿ ಮಾತ್ರ ತಾಂತ್ರಿಕ ವಿಷಯಗಳಲ್ಲಿ ವ್ಯತ್ಯಾಸ ಹೊಂದಿದ್ದಾರೆ. ತಾಂತ್ರಿಕವಾಗಿ ಅವರು ಶ್ರೇಷ್ಟರಾಗಿದ್ದರೂ ತಾಂತ್ರಿಕ ಅನುಷ್ಠಾನದ ಕೊರತೆಯಿದೆ ಎಂದು ಮಾರ್ಟಿನೆಜ್ ತಿಳಿಸಿದ್ದಾರೆ. 
 
ಭಾರತದ ಫುಟ್ಬಾಲ್ ಅದರ ಗುಣಮಟ್ಟದಲ್ಲಿ ಸುಧಾರಿಸಬೇಕಾದರೆ, ಕೆಳಮಟ್ಟದಿಂದ ಸುದೀರ್ಘ ಕಾಲದ ಅಭಿವೃದ್ಧಿ ಯೋಜನೆಯ ಅಗತ್ಯವಿದೆ ಎಂದರು. ಮುಂದಿನ 2-3 ವರ್ಷಗಳಲ್ಲಿ ಅದಕ್ಕೆ ಪರಿಹಾರ ಸಾಧ್ಯವಿಲ್ಲ. ನಮಗೆ ಹೆಚ್ಚು ಕಾಲಾವಕಾಶ ಬೇಕು. ಸುದೀರ್ಘ ಕಾಲದ ಯೋಜನೆಯ ಪ್ರಾಜೆಕ್ಟ್‌ಗಳು ನಮಗೆ ಅಗತ್ಯವಿದೆ ಎಂದರು. 
 
 ತಮ್ಮ ಹೊಸ ತಂಡದ ಆಟಗಾರರಿಂದ ಏನನ್ನು ನಿರೀಕ್ಷಿಸುತ್ತೀರಿ ಎಂಬ ಪ್ರಶ್ನೆಗೆ ನಾವು ವೃತ್ತಿಪರ ಆಟಗಾರರಿಂದ ನಿರೀಕ್ಷಿಸಿದ್ದನ್ನೇ ಅವರಿಂದ ನಿರೀಕ್ಷಿಸುತ್ತೇವೆ. ಬದ್ಧತೆ, ಶ್ರಮದ ದುಡಿಮೆ ಮತ್ತು ಚಾಂಪಿಯನ್‌ಷಿಪ್‌ನಲ್ಲಿ ಅತ್ಯುತ್ತಮವಾಗಿ ಆಡಿ ಗೆಲ್ಲುವ ಯತ್ನ ಎಂದು ವಿಶ್ಲೇಷಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

ಮುಂದಿನ ಸುದ್ದಿ
Show comments