Select Your Language

Notifications

webdunia
webdunia
webdunia
webdunia

16 ವರ್ಷಗಳ ಬಳಿಕ ಹಾಕಿಯಲ್ಲಿ ಸ್ವರ್ಣ ಪದಕ ಗೆದ್ದ ಭಾರತ ಮಹತ್ವದ ಸಾಧನೆ

16 ವರ್ಷಗಳ ಬಳಿಕ ಹಾಕಿಯಲ್ಲಿ ಸ್ವರ್ಣ ಪದಕ ಗೆದ್ದ ಭಾರತ ಮಹತ್ವದ ಸಾಧನೆ
ಇಂಚಾನ್ , ಗುರುವಾರ, 2 ಅಕ್ಟೋಬರ್ 2014 (19:05 IST)
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ 16 ವರ್ಷಗಳ ಬಳಿಕ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದೆ. ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿದ್ದರಿಂದ 2016ರ ಒಲಿಂಪಿಕ್ಸ್‌ಗೆ ಭಾರತ ತಂಡ ಪ್ರವೇಶ ಪಡೆದಿದೆ. ಪಾಕಿಸ್ತಾನದ ವಿರುದ್ಧ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಭಾರತ ಜಯಭೇರಿ ಬಾರಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. 
 
 ಕಡುವೈರಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಪಂದ್ಯದ ಪೂರ್ಣಾವಧಿಯಲ್ಲಿ ಎರಡೂ ತಂಡಗಳು 1-1 ಗೋಲು ಗಳಿಸಿ ಸಮನಾಗಿತ್ತು. ಪಾಕಿಸ್ತಾನದ ಪರ ಮಹ್ಮದ್ ರಿಜ್ವಾನ್ ಮೊದಲ ಗೋಲನ್ನು 4ನೇ ನಿಮಿಷದಲ್ಲಿ ಗಳಿಸಿದರು. 12ನೇ ನಿಮಿಷದಲ್ಲಿ ಭಾರತ ತಂಡದ ಕೋಹಜಿತ್ ಸಿಂಗ್ ಗೋಲು ಗಳಿಸುವ ಮೂಲಕ ಉಭಯ ತಂಡಗಳು 1-1 ಗೋಲಿನಲ್ಲಿ ಸಮನಾಗಿದ್ದವು.

ನಂತರದ ಶೂಟ್‌ಔಟ್‌ನಲ್ಲಿ ಅಕ್ಷದೀಪ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಬೀರೇಂದ್ರ ಲಕ್ರಾ ಮತ್ತು ಧರ್ಮವೀರ್ ಸಿಂಗ್ ಭಾರತದ ಪರ ಗೋಲು ಹೊಡೆದರೆ, ಮನಪ್ರೀತ್ ಸಿಂಗ್ ಗೋಲು ಬಾರಿಸುವಲ್ಲಿ ವಿಫಲರಾದರು. ಆದರೆ ಭಾರತದ ಗೋಲಿ ಮತ್ತು ಉಪನಾಯಕ ಸ್ರೀಜೇಶ್  ಪಾಕಿಸ್ತಾನದ ಅಬ್ದುಲ್ ಹಸೀಮ್ ಖಾನ್ ಮತ್ತು ಮಹಮ್ಮದ್ ಉಮರ್ ಬಟ್ಟಾ ಹೊಡೆದ ಶೂಟ್‌ಔಟ್‌ಗಳನ್ನು ಮೈನವಿರೇಳಿಸುವಂತೆ ರಕ್ಷಣೆ ಮಾಡಿದ್ದರಿಂದ 4-2 ಗೋಲುಗಳ ಅಂತರದಿಂದ ಭಾರತ ಜಯಗಳಿಸಿದೆ.

Share this Story:

Follow Webdunia kannada