Webdunia - Bharat's app for daily news and videos

Install App

ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಭಾರತ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್‌ಗೆ

Webdunia
ಗುರುವಾರ, 16 ಜೂನ್ 2016 (14:24 IST)
ಆಸ್ಟ್ರೇಲಿಯಾ ವಿರುದ್ಧ ಗುರುವಾರ ಫೈನಲ್ ಲೀಗ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ ಪ್ರವೇಶಿಸುವ ಆಶಾವಾದವನ್ನು ಭಾರತ ಹೊಂದಿದೆ. ನಂತರ ಆಸ್ಟ್ರೇಲಿಯಾ ವಿರುದ್ಧವೇ ಫೈನಲ್ ಪಂದ್ಯವನ್ನು ಭಾರತ ಆಡಬೇಕಿದೆ. ಭಾರತ ಫೈನಲ್ ತಲುಪಲು ಎರಡು ಸಾಧ್ಯತೆಗಳಿವೆ. ಗ್ರೇಟ್ ಬ್ರಿಟನ್ ಕೂಡ ಫೈನಲ್ ಪ್ರವೇಶಿಸಲು ಕಣದಲ್ಲಿದೆ. ಬೆಲ್ಜಿಯಂ, ಜರ್ಮನಿ ಮತ್ತು ದಕ್ಷಿಣ ಕೊರಿಯಾ ಸ್ಪರ್ಧೆಯಿಂದ ನಿರ್ಗಮಿಸಿವೆ.  

ಭಾರತ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಪೂಲ್‌ನಲ್ಲಿ 10 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಮುಟ್ಟಿ ಫೈನಲ್ ತಲುಪುತ್ತದೆ. ಆಸ್ಟ್ರೇಲಿಯಾಗಿಂತ ಒಂದು ಗೋಲ್ ಮಾತ್ರ ವ್ಯತ್ಯಾಸವನ್ನು ಹೊಂದಿರುತ್ತದೆ. ಭಾರತ 3 ಗೋಲುಗಳ ಅಂತರದಿಂದ ಗೆದ್ದರೆ ಅದು ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುತ್ತದೆ. ಆಗ ಇತರ ಪಂದ್ಯಗಳ ಫಲಿತಾಂಶ ಪರಿಗಣನೆಯಾಗುವುದಿಲ್ಲ.
 
ಭಾರತ ಆಸ್ಟ್ರೇಲಿಯಾ ಜತೆ ಡ್ರಾ ಮಾಡಿಕೊಂಡರೆ ಬೆಲ್ಜಿಯಂ ತಂಡವು ಬ್ರಿಟನ್ ತಂಡವನ್ನು ಸೋಲಿಸಬೇಕು ಅಥವಾ ಡ್ರಾಮಾಡಿಕೊಳ್ಳಬೇಕು. ಬ್ರಿಟನ್ ಗೋಲ್ ವ್ಯತ್ಯಾಸವು +2 ಆಗಿದ್ದು, ಭಾರತದ +1 ಗಿಂತ ಹೆಚ್ಚಾಗಿದೆ. ಬ್ರಿಟನ್ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಮಾತ್ರ ಭಾರತ ಫೈನಲ್ ತಲುಪುತ್ತದೆ. ಭಾರತ ಸೋತರೂ ಕೂಡ ಫೈನಲ್ ತಲುಪಬಹುದು. ಆದರೆ ಬೆಲ್ಜಿಯಂ ತಂಡವು ಗ್ರೇಟ್ ಬ್ರಿಟನ್ ತಂಡದ ಜತೆ ಡ್ರಾ ಮಾಡಿಕೊಳ್ಳಬೇಕು.

ಒಟ್ಟಿನಲ್ಲಿ ಬ್ರಿಟನ್ ಸೋತರೆ ಭಾರತಕ್ಕೆ ಅನುಕೂಲ. ಬ್ರಿಟನ್ ಗೆದ್ದರೆ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲದೇ ಬೇರೆ ದಾರಿಯೇ ಇಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವು ಕಬ್ಬಿಣದ ಕಡಲೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತದ ಟ್ರಾಕ್ ದಾಖಲೆ ನಕಾರಾತ್ಮಕವಾಗಿದೆ. ವಿಶ್ವಲೀಗ್ ಸೆಮಿಫೈನಲ್ಸ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು 6-2ರಿಂದ ಸೋಲಿಸಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಸಿಸಿ ಹೊಸ ಸಿಇಓ ಆಗಿ ಭಾರತೀಯ ಸಂಜೋಗ್ ಗುಪ್ತಾ, ಇವರ ಸಾಧನೆ ಇಲ್ಲಿದೆ

ಅಭಿನಂದಿಸಲು ಸಿರಾಜ್‌ನನ್ನೇ ಕೈಬಿಟ್ಟ ಜಯ್‌ಶಾ: ಮುಸ್ಲಿಂ ಎಂಬ ಕಾರಣವೇ ಹೊಗಳಿಕೆಯಿಂದ ದೂರವಿರಲು ಕಾರಣವಾಯಿತೆ,ವಿವಾದ

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

IND vs ENG: ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ ಒಂದು ಮಾತು ಇಂಗ್ಲೆಂಡ್ ಭಯ ಹೆಚ್ಚಿಸುತ್ತೆ

ಮುಂದಿನ ಸುದ್ದಿ
Show comments