Webdunia - Bharat's app for daily news and videos

Install App

ತರಬೇತಿಯಲ್ಲಿ ಜಿಪುಣತನ ತೋರಿಸುವ ಭಾರತದಿಂದ ಪದಕ ಗೆದ್ದಮೇಲೆ ಹಣದ ಹೊಳೆ

Webdunia
ಬುಧವಾರ, 24 ಆಗಸ್ಟ್ 2016 (10:38 IST)
ಒಲಿಂಪಿಕ್ ಅಥ್ಲೀಟ್‌ಗಳ ತರಬೇತಿ ಸಮಯದಲ್ಲಿ ಹಣ ಖರ್ಚು ಮಾಡಲು ಜಿಪುಣತನ ತೋರಿಸಿದ್ದ ಭಾರತ ಪಿ.ವಿ. ಸಿಂಧು ಮತ್ತು ಸಾಕ್ಷಿ ಮಲಿಕ್ ಒಲಿಂಪಿಕ್ ಪದಕಗಳನ್ನು ಗೆದ್ದ ಮೇಲೆ ಸರ್ಕಾರಿ ಸಂಸ್ಥೆಗಳು ನಗದು ಹಣ ಪುರಸ್ಕಾರಗಳ ಮಳೆಗರೆಯುತ್ತಿವೆ. ದೀಪಾ ಕರ್ಮಾಕರ್ ಮತ್ತು ಲಲಿತಾ ಬಾಬರ್ ಕೂಡ ನಗದು ಪ್ರಶಸ್ತಿಗಳ ಸಾಲಿನಲ್ಲಿದ್ದಾರೆ.

ಸಿಂಧುಗೆ ಈಗಾಗಲೇ 13 ಕೋಟಿ ಪುರಸ್ಕಾರದ ಭರವಸೆ ನೀಡಲಾಗಿದ್ದರೆ, ಸಾಕ್ಷಿಗೆ 5.6 ಕೋಟಿ ರೂ. ಹಾಗೂ ಲಲಿತಾ ಮತ್ತು ದೀಪಾ ಅವರಿಗೆ ತಲಾ 15 ಲಕ್ಷ ರೂ. ನೀಡಲಾಗುತ್ತಿದ್ದು, ಈ ಅಂಕಿಅಂಶಗಳು ಇನ್ನಷ್ಟು ಏರುವ ಸಾಧ್ಯತೆಯಿದೆ.
 
ಈ ಅಥ್ಲೀಟ್‌ಗಳು ಒಲಿಂಪಿಕ್ ಕ್ರೀಡಾಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಅವರಿಗೆ ಅತೀ ಅಗತ್ಯವಿದ್ದಾಗ ಅವರಿಗೆ ಖರ್ಚು ಮಾಡಿದ ಹಣವನ್ನು ಸಿಂಧು ಮತ್ತು ಸಾಕ್ಷಿಗೆ ನೀಡಿದ ನಗದು ಪುರಸ್ಕಾರಗಳಿಗೆ ಹೋಲಿಕೆ ಮಾಡಿದಾಗ ಅಥ್ಲೀಟ್‌ಗಳಿಗೆ ಖರ್ಚು ಮಾಡಿದ ಹಣ ತೀರಾ ಕಡಿಮೆಯೆನಿಸುತ್ತದೆ. ಕ್ರೀಡಾ ಸಚಿವಾಲಯ ಭಾರತದ ಪದಕ ಭವಿಷ್ಯದ ಸುಧಾರಣೆಗೆ ವಿಶೇಷ ಕಾರ್ಯಕ್ರಮವನ್ನು ನಿರ್ವಹಿಸುತ್ತದೆ. ಇದನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್(ಟಿಒಪಿ) ಎನ್ನಲಾಗುತ್ತದೆ.

ಈ ಯೋಜನೆಯಡಿ ಸಿಂಧುಗೆ 44 ಲಕ್ಷ ಮತ್ತು ಸಾಕ್ಷಿಗೆ 12 ಲಕ್ಷ ರೂ. ನೀಡಲಾಯಿತು. ಅದು ಸಿಂಧುವಿನ ಪದಕದ ನಂತರದ ನಗದು ಪ್ರಶಸ್ತಿಗಳಿಗೆ ಹೋಲಿಸಿದರೆ 3.4% ಮತ್ತು ಸಾಕ್ಷಿ ಪಡೆದ ನಗದು ಹಣದ ಶೇ. 2.1%ರಷ್ಟಾಗಿದೆ. ವಾಲ್ಟ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ದೀಪಾಗೆ ಒಲಿಂಪಿಕ್ ಸಿದ್ಧತೆಗೆ ಖರ್ಚು ಮಾಡಿದ ಹಣ ಕೇವಲ 2 ಲಕ್ಷ ರೂ.
 
ಪದಕ ವಿಜೇತರನ್ನು ರೂಪಿಸಲು ಅನೇಕ ರಾಷ್ಟ್ರಗಳು ಹಣ ಖರ್ಚು ಮಾಡಿದರೆ ಭಾರತ ವಿಶಿಷ್ಟ ಮಾದರಿ ಹೊಂದಿದ್ದು, ಅಥ್ಲೀಟ್‌ಗಳು ಗೆದ್ದ ಮೇಲೆ ಅವರಿಗೆ ಹಣದ ಹೊಳೆ ಹರಿಸುತ್ತದೆ. ರಿಯೊದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 118 ಅಥ್ಲೀಟ್‌ಗಳ ಪೈಕಿ 67 ಮಂದಿಗೆ ಟಾಪ್ಸ್ ಆರ್ಥಿಕ ನೆರವು ನೀಡಿದ್ದು 17.1 ಕೋಟಿ ರೂ. ಸ್ವೀಕರಿಸಿದ್ದಾರೆ. ಇದು ಸಿಂಧು ಮತ್ತು ಸಾಕ್ಷಿಗೆ ನೀಡುವ ನಗದು ಪುರಸ್ಕಾರಗಳ ಮೊತ್ತಕ್ಕಿಂತ ಕಡಿಮೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments