Webdunia - Bharat's app for daily news and videos

Install App

ಚಾಂಪಿಯನ್ಸ್ ಟ್ರೋಫಿ ಹಾಕಿಯಲ್ಲಿ ಭಾರತ, ಜರ್ಮನಿ ವಿರುದ್ಧ 3-3 ಡ್ರಾಗೆ ತೃಪ್ತಿ

Webdunia
ಶನಿವಾರ, 11 ಜೂನ್ 2016 (19:17 IST)
ಹಾಲಿ ಚಾಂಪಿಯನ್ ಜರ್ಮನಿ ವಿರುದ್ಧ ಶುಕ್ರವಾರ ಭಾರತ ಚಾಂಪಿಯನ್ಸ್ ಟ್ರೋಫಿ ಹಾಕಿ ಅಭಿಯಾನವನ್ನು ರೋಚಕ ಹಣಾಹಣಿಯ 3-3 ಡ್ರಾದೊಂದಿಗೆ ತೃಪ್ತಿಪಡೆದುಕೊಂಡಿದೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಜರ್ಮನಿ 2 ಗೋಲುಗಳಿಂದ ಹಿಂದಿತ್ತು. ಆದರೆ ಭಾರತ ಕೊನೆಯ ಮೂರು ನಿಮಿಷಗಳಲ್ಲಿ ಚೆಂಡಿನ ಮೇಲಿನ ಹಿಡಿತ ಕಳೆದುಕೊಂಡು ಡ್ರಾಗೆ ತೃಪ್ತಿಪಡಬೇಕಾಯಿತು. ಮೊದಲಿಗೆ ವಿ. ಆರ್. ರಘುನಾಥ್ ಪೆನಾಲ್ಟಿ ಕಾರ್ನರ್‌ವೊಂದನ್ನು ಗೋಲಾಗಿಸಿ 1-0 ಮುನ್ನಡೆಯನ್ನು ಭಾರತ ಗಳಿಸಿತು. 
 
 ಜರ್ಮನಿ 24 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ವಿಫಲಗೊಳಿಸಿತು. 2 ನಿಮಿಷಗಳ ನಂತರ  ಜರ್ಮನಿಯ ಟಾಮ್ ಗ್ರಾಮ್‌ಬಶ್ಚ್ ಪೆನಾಲ್ಟಿ ಕಾರ್ನರ್ ಗೋಲಾಗಿಸಿದರು. ಆದರೆ ಅವರ ಸಂತಸ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಿಡ್ ಫೀಲ್ಡರ್ ಮಂದೀಪ್ ಸಿಂಗ್ ಮನೋಜ್ಞ ಗೋಲಿನ ಮೂಲಕ ಭಾರತ 2-1 ಮುನ್ನಡೆ ಸಾಧಿಸಿತು. ವಿರಾಮದ ನಂತರ ಭಾರತ 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಸಿಂಗ್ ಮತ್ತೊಂದು ಗೋಲನ್ನು ಬಾರಿಸಿದರು. ಗ್ರಾಮ್‌ಬಶ್ಚ್ ಪೆನಾಲ್ಟಿ ಕಾರ್ನರೊಂದನ್ನು ಗೋಲಾಗಿಸಿ ಜರ್ಮನಿ ಮತ್ತೊಂದು ಪಾಯಿಂಟ್ ಗಳಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ 3-2ರಿಂದ ಮುನ್ನಡೆ ಸಾಧಿಸಿತ್ತು.
 
 ನಾಲ್ಕನೇ ಕ್ವಾರ್ಟರ್‌ನ 52ನೇ ನಿಮಿಷದಲ್ಲಿ ಮಂದೀಪ್ ಗೋಲು ಗಳಿಸುವ ಅವಕಾಶ ಕಳೆದುಕೊಂಡರು.  ಜೋನಾಸ್ ಗೋಮಾಲ್ ಅವರ ಪೆನಾಲ್ಟಿ ಸ್ಟ್ರೋಕ್‌ನಿಂದ ಅಂತಿಮ ನಿಮಿಷಗಳಲ್ಲಿ ಜರ್ಮನಿ ಸ್ಕೋರನ್ನು 3-3ರಿಂದ ಸಮಗೊಳಿಸಿತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಲೈಂಗಿಕ ಕಿರುಕುಳ ಪ್ರಕರಣ: ಆರ್‌ಸಿಬಿ ಆಟಗಾರ ಯಶ್ ದಯಾಳ್‌ಗೆ ತಾತ್ಕಾಲಿಕ ರಿಲೀಫ್‌

WI vs AUS: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ಔಟಾದ ವೆಸ್ಟ್ ಇಂಡೀಸ್

IND vs ENG: ಟೀಂ ಇಂಡಿಯಾ ಸೋಲಿಗೆ ಈ ಮೂವರು ಆಟಗಾರರೇ ಕಾರಣ

ಭುಜಬಲದ ಪರಾಕ್ರಮ ಮೆರೆದ ಮೊಹಮ್ಮದ್‌ ಸಿರಾಜ್‌ಗೆ ಐಸಿಸಿ ಶಾಕ್‌: ನಿಷೇಧದ ಭೀತಿಯಲ್ಲಿ ಭಾರತದ ವೇಗಿ

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕಶ್ಯಪ್ ದಾಂಪತ್ಯದಲ್ಲಿ ಬಿರುಕು

ಮುಂದಿನ ಸುದ್ದಿ
Show comments