Select Your Language

Notifications

webdunia
webdunia
webdunia
webdunia

ಜರ್ಮನಿಯನ್ನು 2-0ಯಿಂದ ಸೋಲಿಸಿದ ಫ್ರಾನ್ಸ್ ಯೂರೊ ಕಪ್ ಫೈನಲ್‌ಗೆ ಲಗ್ಗೆ

ಜರ್ಮನಿಯನ್ನು 2-0ಯಿಂದ ಸೋಲಿಸಿದ ಫ್ರಾನ್ಸ್ ಯೂರೊ ಕಪ್ ಫೈನಲ್‌ಗೆ ಲಗ್ಗೆ
ಮಾರ್ಸೆಲೆ , ಶುಕ್ರವಾರ, 8 ಜುಲೈ 2016 (13:01 IST)
ಆತಿಥೇಯ ಫ್ರಾನ್ಸ್ ತಂಡವು ಯೂರೊ 2016ರ ಸೆಮಿಫೈನಲ್ ಪಂದ್ಯದಲ್ಲಿ  ವಿಶ್ವ ಕಪ್ ವಿಜೇತ ಜರ್ಮನಿಯನ್ನು 2-0ಯಿಂದ ಸೋಲಿಸುವ ಮೂಲಕ ಭಾನುವಾರ ಪೋರ್ಚು‌ಗಲ್ ವಿರುದ್ಧ ಫೈನಲ್‌ಗೆ ಪ್ರವೇಶಿಸಿದೆ. ಆಂಟೊಯಿನ್ ಗ್ರೇಜ್‌ಮ್ಯಾನ್ ಮೊದಲಾರ್ಧದಲ್ಲಿ ಒಂದು ಗೋಲು ಮತ್ತು ಉತ್ತರಾರ್ಧದಲ್ಲಿ ಇನ್ನೊಂದು ಗೋಲು ಗಳಿಸಿ ಫ್ರಾನ್ಸ್ ತಂಡದ ಸ್ಟಾರ್ ಆಟಗಾರರಾಗಿ ಹೊರಹೊಮ್ಮಿದರು. ಈ ಪಂದ್ಯವು ವಿರಾಮದ ವೇಳೆಯಲ್ಲಿ 0-0ಯಿಂದ ಡ್ರಾ ಆಗಬಹುದೆಂದು ಎಣಿಸಲಾಗಿತ್ತು.

ಆದರೆ  ಬ್ಯಾಸ್ಟಿಯನ್ ಸ್ಕೆವೈನ್‌ಸ್ಟೈಗರ್ ಅವರ ಕೈಗೆ ಚೆಂಡು ತಾಗಿದ್ದರಿಂದಾಗಿ ಪ್ರಥಮಾರ್ಧದ ಹೆಚ್ಚುವರಿ ಸಮಯದಲ್ಲಿ ಫ್ರಾನ್ಸ್‌ಗೆ ಪೆನಾಲ್ಟಿ ಕಿಕ್ ಒದಗಿಬಂತು. ಗ್ರೇಜ್‌ಮ್ಯಾನ್ ಜರ್ಮನಿಯ ಮ್ಯಾನುಯಲ್ ನ್ಯುಯರ್ ಅವರನ್ನು ವಂಚಿಸಿ ಗೋಲಾಗಿಸಿದರು. 72ನೇ ನಿಮಿಷದಲ್ಲಿ ಗ್ರೇಜ್‌ಮ್ಯಾನ್ ಎರಡನೇ ಗೋಲು ಹೊಡೆದರು.
 
 ಜರ್ಮನಿಯ ಜೋಷುವಾ ಕಿಮಿಚ್ ತಪ್ಪಿನಿಂದ ಲಾಭ ಪಡೆದ ಫ್ರಾನ್ಸ್ ಪರ ಗ್ರೇಜ್‌ಮ್ಯಾನ್ ಎರಡನೇ ಗೋಲು ಗಳಿಸಿದರು. ರೋಗ್ಬಾ ಕಳಿಸಿದ ಕ್ರಾಸನ್ನು ಜರ್ಮನ್ ಗೋಲ್‌ಕೀಪಲ್ ನ್ಯೂಯರ್ ಸರಿಯಾಗಿ ನಿಭಾಯಿಸದಿದ್ದರಿಂದ ಗ್ರೇಜ್‌ಮ್ಯಾನ್ ಗೋಲುಪೆಟ್ಟಿಯೊಳಗೆ ಚೆಂಡನ್ನು ಯಶಸ್ವಿಯಾಗಿ ಹಾಕಿದರು.  ಜರ್ಮನಿ ಗೋಲು ಗಳಿಸುವುದಕ್ಕೆ ತೀವ್ರ ಹೋರಾಟ ಮಾಡಿತಾದರೂ ವಿಫಲಗೊಂಡು ಫ್ರಾನ್ಸ್ 2-0ಯಿಂದ ಯೂರೊ ಕಪ್ ಫೈನಲ್‌ಗೆ ಪ್ರವೇಶಿಸಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಟಿಷ್ ಏರ್‌ವೇಸ್ ಎಡವಟ್ಟಿನಿಂದಾಗಿ ಅನಿಲ್ ಕುಂಬ್ಳೆ ಬ್ಯಾಗೇಜ್ ಮಿಸ್