Select Your Language

Notifications

webdunia
webdunia
webdunia
webdunia

ನಿಮ್ಮ ಹೆಸರು ಸಿಂಧು ಎಂದಾದಲ್ಲಿ ಪಿಜ್ಜಾ ಹಟ್‌ನಲ್ಲಿ ನಿಮಗೆ ಉಚಿತ ಪಿಜ್ಜಾ

ನಿಮ್ಮ ಹೆಸರು ಸಿಂಧು ಎಂದಾದಲ್ಲಿ ಪಿಜ್ಜಾ ಹಟ್‌ನಲ್ಲಿ ನಿಮಗೆ ಉಚಿತ ಪಿಜ್ಜಾ
ಮುಂಬೈ: , ಶನಿವಾರ, 20 ಆಗಸ್ಟ್ 2016 (19:19 IST)
ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ.ಸಿಂಧು ಅವರಂತೆ ನಿಮ್ಮ ಹೆಸರು ಕೂಡಾ ಸಿಂಧು ಎನ್ನುವುದಾಗಿದ್ದಲ್ಲಿ ನಿಮಗೆ ಪಿಜ್ಜಾ ಹಟ್‌ಗೆ ಹೋಗಿ ಉಚಿತ ಪಿಜ್ಜಾ ಸವಿಯಬಹುದು. 
 
ಪಿಜ್ಜಾ ಹಟ್ ಸಂಸ್ಥೆ ಪಿ.ವಿ.ಸಿಂಧು ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದರಿಂದ ಸಿಂಧು ಎನ್ನುವ ಹೆಸರಿರುವ ಯುವತಿಯರು ಉಚಿತವಾಗಿ ಪಿಜ್ಜಾ ತಿನ್ನಲು ಅವಕಾಶ ನೀಡಿದೆ.
 
ಪಿಜ್ಜಾ ಹಟ್ ಸಂಸ್ಥೆ, ರಿಯೋ ಒಲಿಂಪಿಕ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಗೆಲುವಿನ ಸಂಭ್ರಮಾಚರಣೆಯನ್ನು ಘೋಷಿಸಿತ್ತು. 
 
ಸಾಕ್ಷಿ ಹೆಸರಿನ ನೂರಾರು ಯುವತಿಯರು ಪಿಜ್ಜಾ ಹಟ್‌ಗೆ ತೆರಳಿ ಉಚಿತ ಪಿಜ್ಜಾ ತಿಂದು ಸಂಭ್ರಮಾಚರಿಸಿದರು.
 
ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು ಬೆಳ್ಳಿ ಪದಕ ಗೆದ್ದ ಸಾಕ್ಷಿ ಮತ್ತು ಸಿಂಧು ಕಠಿಣ ಪರಿಶ್ರಮಕ್ಕೆ ನಮ್ಮದೊಂದು ಕಿರು ಕಾಣಿಕೆ ಎಂದು ಪಿಜ್ಜಾ ಹಟ್ ವ್ಯವಸ್ಥಾಪಕ ನಿರ್ದೇಶಕ ಉನ್ನತ್ ವರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಿಯೋ ಒಲಿಂಪಿಕ್ಸ್‌ಗಾಗಿ ಕಠಿಣ ಪರಿಶ್ರಮಪಟ್ಟಿದ್ದೇನೆ: ಪಿ.ವಿ.ಸಿಂಧು