Select Your Language

Notifications

webdunia
webdunia
webdunia
webdunia

ನಾಲ್ಕು ರಾಷ್ಟ್ರಗಳ ಹಾಕಿ: ಭಾರತಕ್ಕೆ ಕಂಚು

ನಾಲ್ಕು ರಾಷ್ಟ್ರಗಳ ಹಾಕಿ: ಭಾರತಕ್ಕೆ ಕಂಚು
Melbourne , ಸೋಮವಾರ, 28 ನವೆಂಬರ್ 2016 (13:48 IST)
ಮೆಲ್ಬರ್ನ್: ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಪಂದ್ಯಾವಳಿಯಲ್ಲಿ ಮಲೇಷ್ಯಾವನ್ನು ಸೋಲಿಸಿದ ಭಾರತ ತಂಡ ಕಂಚಿನ ಪದಕ ಗೆದ್ದಿದೆ. ಮಲೇಷ್ಯಾವನ್ನು ಭಾರತ 4-1 ಅಂತರದಿಂದ ಸೋಲಿಸಿತು.

ಬಿರುಸಿನ ಆಟವಾಡಿದ ಭಾರತೀಯರು ಅಂತ್ಯದವರೆಗೂ ಎದುರಾಳಿಗೆ ಮೇಲುಗೈ ಸಾಧಿಸಲು ಬಿಡಲಿಲ್ಲ. ಭಾರತದದ ಪರ ಆಕಾಶ್ ದೀಪ್, ರಘುನಾಥ್, ತಲ್ವಿಂದರ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ಗೋಲು ಭಾರಿಸಿದರು.

ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ನಂತರ ಭರ್ಜರಿ ಫಾರ್ಮ್ ನಲ್ಲಿರುವ ಭಾರತ ಹಾಕಿ ತಂಡ ಇಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮೊದಲ ಎರಡು ಸ್ಥಾನದಲ್ಲಿರುವ ತಂಡಗಳು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಣವಿಲ್ಲದೆ ಒದ್ದಾಡಿದ ಇಂಗ್ಲೆಂಡ್ ಅಭಿಮಾನಿ ಸಂಘ, ಹೃದಯವಂತಿಕೆ ಮೆರೆದ ಹೋಟೆಲ್ ಮ್ಯಾನೇಜರ್