Webdunia - Bharat's app for daily news and videos

Install App

ಅತ್ಯಾಚಾರ: ಮಾಜಿ ಟೆನ್ನಿಸ್ ಚಾಂಪಿಯನ್ ಬಾಬ್ ಹೆವಿಟ್‌ಗೆ 6 ವರ್ಷ ಜೈಲುಶಿಕ್ಷೆ

Webdunia
ಸೋಮವಾರ, 18 ಮೇ 2015 (18:11 IST)
ಗ್ರಾಂಡ್ ಸ್ಲಾಮ್ ಡಬಲ್ಸ್ ಮಾಜಿ ಚಾಂಪಿಯನ್ ಬಾಬ್ ಹೆವಿಟ್ ಅವರಿಗೆ ಅತ್ಯಾಚಾರ ಮತ್ತು ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ದಕ್ಷಿಣ ಆಫ್ರಿಕಾ ಕೋರ್ಟ್ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 
 
ಆಸ್ಟ್ರೇಲಿಯಾದಲ್ಲಿ ಜನಿಸಿದ 75 ವರ್ಷ ವಯಸ್ಸಿನ ಹೆವಿಟ್ ದಕ್ಷಿಣ ಆಫ್ರಿಕಾದಲ್ಲಿ 1980 ಮತ್ತು 1990ರ ದಶಕದಲ್ಲಿ ಮಕ್ಕಳಿಗೆ ಟೆನ್ನಿಸ್ ಕೋಚಿಂಗ್ ನೀಡುತ್ತಿದ್ದ ಸಂದರ್ಭದಲ್ಲಿ  ಮೂವರು ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಲಾಗಿದೆ. 
 
ಶಿಕ್ಷೆ ವಿಧಿಸುವುದಕ್ಕೆ ಮುಂಚೆ ಹೆವಿಟ್ ತಮ್ಮ ಅನಾರೋಗ್ಯದ ಸ್ಥಿತಿಯನ್ನು ಗಮನಕ್ಕೆ ತೆಗೆದುಕೊಳ್ಳಬೇಕೆಂದು ಕೋರ್ಟ್‌ಗೆ ಮನವಿ ಮಾಡಿದರು.ತಮ್ಮನ್ನು ಜೈಲಿಗೆ ಹಾಕಿದರೆ ಹಲ್ಲೆ ಮಾಡುವುದಾಗಿ ಅಜ್ಞಾತ ಕರೆಗಳು ಎಚ್ಚರಿಸಿರುವುದಾಗಿ ಹೆವಿಟ್ ಹೇಳಿದ್ದಾರೆ. 
 
ತಾವು 2010ರಲ್ಲಿ ಸ್ಟ್ರೋಕ್ ಮತ್ತು 2011ರಲ್ಲಿ ಹೃದಯಾಘಾತಕ್ಕೆ ಒಳಗಾಗಿರುವುದಾಗಿ  ಹೆವಿಟ್ ಕೋರ್ಟ್‌ಗೆ ತಿಳಿಸಿದರು. ಹೆವಿಟ್ 1960 ಮತ್ತು 1970ರ ದಶಕಗಳಲ್ಲಿ  9 ಗ್ರಾಂಡ್ ಸ್ಲಾಮ್ ಡಬಲ್ಸ್‌ಗಳನ್ನು ಮತ್ತು 6 ಗ್ರಾಂಡ್ ಸ್ಲಾಮ್ ಮಿಶ್ರಿತ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ