Select Your Language

Notifications

webdunia
webdunia
webdunia
webdunia

ಫುಟ್ಬಾಲ್‌‌: ಅಂತಿಮ ಪಂದ್ಯದಲ್ಲಿ ಗೆದ್ದ ಪುಣೆ ಎಎಫ್‌‌ಸಿ

ಫುಟ್ಬಾಲ್‌‌: ಅಂತಿಮ ಪಂದ್ಯದಲ್ಲಿ ಗೆದ್ದ ಪುಣೆ ಎಎಫ್‌‌ಸಿ
ಪುಣೆ: , ಬುಧವಾರ, 23 ಏಪ್ರಿಲ್ 2014 (16:16 IST)
ಎಎಫ್‌‌‌‌‌‌ಸಿ ಕಫ್‌ ಫುಟ್ಬಾಲ್‌‌ ಟೂರ್ನಮೆಂಟ್‌‌ನಲ್ಲಿ ನಾಕೌಟ್‌‌‌ಗಿಂತ ಮೊದಲೇ ನಿರ್ಗಮಿಸಿದ ಪುಣೆ ಎಫ್‌‌ಸಿ ತನ್ನ ಎದುರಾಳಿಯಾದ ಹಾಂಕಕಾಂಗ್‌‌‌‌‌‌ನ ಕೆಚಿ ಎಸ್‌‌ಸಿಯನ್ನು 2-0 ಅಂತರದಿಂದ ಸೋಲಿಸಿ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿದ್ದಾರೆ. 
 
ಎಎಫ್‌‌ಸಿ ಕಪ್‌ನಲ್ಲಿ ಮೊದಲ ಬಾರಿ ಭಾಗವಹಿಸಿದ ಪುಣೆ ತಂಡ ಡಿಫೆಂಡರ್‌‌‌ ಜೊಮಿಂಗಲಿಯಾನಾ  ರಾಲ್ಟೆರವರ ಎರಡನೇ ಹಾಫ್‌‌ನಲ್ಲಿ ಎರಡು ಗೊಲುಗಳನ್ನು ( 74ನೇ ಮತ್ತು 80ನೇ ನಿಮಿಷ) ಗಳಿಸುವುದರ ಮೂಲಕ ಗ್ರೂಪ್‌‌‌ ಎಚ್‌‌‌‌‌ನಲ್ಲಿ ಗೆಲುವನ್ನು ಸಾಧಿಸಿದ್ದಾರೆ. 
 
ಈ ಗೆಲುವಿನ  ಮೂಲಕ ಪುಣೆ ಎಫ್‌‌ಸಿಗೆ ಮೂರು ಅಂಕಗಳು ಲಭಿಸಿದೆ. ಈ ಮೂಲಕ ಪುಣೆಗೆ ಒಟ್ಟು 6 ಅಂಕಗಳು ಲಭಿಸಿವೆ. ಗ್ರೂಪ್‌‌ನಲ್ಲಿ ಕಿಚಿ( 13 ಅಂಕ), ನೆ ಪಾಯಿ ಟಾ(8) ಮತ್ತು ತಮ್ಪಾಯಿನ್‌ ರೊವರ್ಸ (6)ರ ನಂತರ ಪುಣೆ ನಾಲ್ಕನೇ ಸ್ಥಾನದಲ್ಲಿದೆ. 

Share this Story:

Follow Webdunia kannada