Webdunia - Bharat's app for daily news and videos

Install App

ಶತಮಾನದ ಬಾಕ್ಸಿಂಗ್ ಕದನ‍: 1000 ಕೋಟಿಗೆ ಒಡೆಯನಾದ ಮೇವೆದರ್

Webdunia
ಭಾನುವಾರ, 3 ಮೇ 2015 (13:03 IST)
ಅಮೆರಿಕಾದ ಲಾಸ್‍ವೇಗಸ್ ಇಂದು ನಡೆದ ಐತಿಹಾಸಿಕ ವಿಶ್ವ ಬಾಕ್ಸಿಂಗ್ ಮೆಗಾ ಫೈಟ್‌ನಲ್ಲಿ ಅಮೆರಿಕಾದ ಫ್ಲಾಯ್ಡ್ ಮೇವೆದರ್ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಫಿಲಿಪೈನ್ಸ್‌ನ ಮ್ಯಾನಿ ಪ್ಯಾಕ್ವಿಯೋರವರನ್ನು ಸೋಲಿಸಿ ಚಾಂಪಿಯನ್ ಆದ ಮೇವದರ್ ಸುಮಾರು 1142 ಕೋಟಿ ಮೊತ್ತವನ್ನು ಬಾಚಿಕೊಂಡಿದ್ದಾರೆ. ಈ ಮೂಲಕ ಮೇವದರ್ ಈ ಶತಮಾನದ ಶ್ರೇಷ್ಠ ಬಾಕ್ಸರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ 8.30ಕ್ಕೆ ಆರಂಭವಾದ ಪಂದ್ಯ 10.15ಕ್ಕೆ ಮುಕ್ತಾಯವಾಯಿತು. 
ಮೊದಲಿನಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಫ್ಲಾಯ್ಡ ಮೇವೆದರ್‌ ತಮ್ಮ ಪ್ರತಿಸ್ಪರ್ಧಿ ಮ್ಯಾನಿ ಪ್ಯಾಕ್ವಿಯೋ 118-110 ,116-112, 116-112 ಅಂತರದಿಂದ ಸೋಲಿಸಿ ಗೆಲುವಿನ ಮಾಲೆ ಧರಿಸಿದರು. 12 ಸುತ್ತುಗಳ ಪಂದ್ಯದಲ್ಲಿ ಮೇವೆದರ್ 9 ಸುತ್ತುಗಳಲ್ಲಿ ಪ್ರಾಬಲ್ಯವನ್ನು ಮೆರೆದರು.
 
ಪಂದ್ಯ ಸೋತು ರನ್ನರ್ ಅಪ್ ಪ್ರಶಸ್ತಿ  ಮ್ಯಾನಿ ಪ್ಯಾಕ್ವಿಯೋ ಕೂಡ 761 ಕೋಟಿ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯವನ್ನು 16 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದರು ಎಂದು ಹೇಳಲಾಗುತ್ತಿದೆ.
 
ಸೋತಿರುವ ಪ್ಯಾಕ್ವಿಯೋ, ಸೆಪ್ಟೆಂಬರ್ ನಲ್ಲಿ ಮತ್ತೆ ನಮ್ಮಿಬ್ಬರ ನಡುವೆಯೇ ಹೋರಾಟ ನಡೆಯಲಿದೆ. ಆಗ ಗೆಲುವು ಸಾಧಿಸುತ್ತೇನೆ ಎಂದು ಘೋಷಿಸಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments