Select Your Language

Notifications

webdunia
webdunia
webdunia
webdunia

ಚಲಿಸುತ್ತಿದ್ದ ರೈಲಿನಿಂದ ದೂಡಿದ ಪೊಲೀಸರು: ಫೆನ್ಸಿಂಗ್ ಚಾಂಪಿಯನ್ ಸಾವು

ಚಲಿಸುತ್ತಿದ್ದ ರೈಲಿನಿಂದ ದೂಡಿದ ಪೊಲೀಸರು: ಫೆನ್ಸಿಂಗ್ ಚಾಂಪಿಯನ್ ಸಾವು
ಮಥುರಾ , ಶುಕ್ರವಾರ, 24 ಜುಲೈ 2015 (16:21 IST)
ರಾಷ್ಟ್ರೀಯ ಫೆನ್ಸಿಂಗ್ (ಕತ್ತಿವರಸೆ)ಆಟಗಾರ ಹೋಷಿಯಾರ್ ಸಿಂಗ್ ಎಂಬವರನ್ನು ಚಲಿಸುತ್ತಿದ್ದ ರೈಲಿನಿಂದ ರೈಲ್ವೆ ಪೊಲೀಸ್ ಸಿಬ್ಬಂದಿ ನೂಕಿದ್ದರಿಂದ ಅವರು ಮೃತಪಟ್ಟಿದ್ದಾರೆ. ಹೋಷಿಯಾರ್ ತಮ್ಮ ತಾಯಿ, ಪತ್ನಿ ಮತ್ತು 7 ವರ್ಷದ ಮಗುವಿನ ಜೊತೆ ಮಥುರಾಗೆ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

 ತಮ್ಮ ಪತ್ನಿ ಮತ್ತು ತಾಯಿ ಕುಳಿತಿದ್ದ ಮಹಿಳಾ ಮೀಸಲು ಬೋಗಿಗೆ ಅವರು ತೆರಳಿದ್ದರು. ಪತ್ನಿ ತಮಗೆ ಹುಷಾರಿಲ್ಲ ಎಂದು ತಿಳಿಸಿದ್ದರಿಂದ ಸಿಂಗ್ ಅಲ್ಲಿಗೆ ತೆರಳಿದ್ದರು. ಆಗ ಪೊಲೀಸರು ಅಲ್ಲಿಗೆ ಆಗಮಿಸಿ ಮಹಿಳಾ ಬೋಗಿಯಲ್ಲಿದ್ದಿದ್ದರಿಂದ ದಂಡ ಕಟ್ಟುವಂತೆ ಅಥವಾ ಕೆಳಕ್ಕಿಳಿಯುವಂತೆ ತಿಳಿಸಿದರು. 
 
ಆಗ ಪೊಲೀಸರು ಮತ್ತು ಸಿಂಗ್ ನಡುವೆ ವಾದವಿವಾದ ನಡೆದು ಚಲಿಸುತ್ತಿದ್ದ ರೈಲಿನಿಂದ ಸಿಂಗ್‌ರನ್ನು ಪೊಲೀಸರು ನೂಕಿದಾಗ ಅವರು ಸ್ಥಳದಲ್ಲೇ ಸತ್ತಿದ್ದಾರೆ. ಮಹಿಳಾ ಬೋಗಿಗೆ ಪತಿ ಬಂದ ಸಂದರ್ಭದಲ್ಲೇ ಪೊಲೀಸ್ ಅಧಿಕಾರಿಗಳು ಬಂದರು. ಆಗ ನಾನು ಪತಿಯ ಜೊತೆ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದರೂ ಅವರನ್ನು ಬಿಡದೇ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ್ದರಿಂದ ಅವರು ರೈಲಿಗೆ ಸಿಲುಕಿ ಸತ್ತಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ತಾವು ಆಗ್ರಹಿಸುವುದಾಗಿ ಪತ್ನಿ ಜ್ಯೋತಿ ಸಿಂಗ್ ಹೇಳಿದ್ದಾರೆ. 
 

Share this Story:

Follow Webdunia kannada