Select Your Language

Notifications

webdunia
webdunia
webdunia
webdunia

ಫ್ರಾನ್ಸ್ ವಿರುದ್ಧ ಸೆಮಿಫೈನಲ್ ಪಂದ್ಯ ಎದುರಿಸಲು ಹೆದರಿಕೆಯಿಲ್ಲ: ಥಾಮಸ್ ಮುಲ್ಲರ್

ಫ್ರಾನ್ಸ್ ವಿರುದ್ಧ  ಸೆಮಿಫೈನಲ್ ಪಂದ್ಯ ಎದುರಿಸಲು ಹೆದರಿಕೆಯಿಲ್ಲ:  ಥಾಮಸ್ ಮುಲ್ಲರ್
ಮಾರ್ಸಿಲೆ: , ಗುರುವಾರ, 7 ಜುಲೈ 2016 (12:07 IST)
ಯೂರೊ 2016ರ ಸೆಮಿ ಫೈನಲ್ಸ್ ಪಂದ್ಯದಲ್ಲಿ ಆತಿಥೇಯ ಫ್ರಾನ್ಸ್ ವಿರುದ್ಧ  ತಮಗೆ ಹೆದರಿಕೆಯೇನೂ ಇಲ್ಲ ಎಂದು ಜರ್ಮನಿ ಮಿಡ್‌ಫೀಲ್ಡರ್ ಥಾಮಸ್ ಮುಲ್ಲರ್ ತಿಳಿಸಿದ್ದಾರೆ..  ಜರ್ಮನಿ ಇಟಲಿಯ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಪೆನಾಲ್ಟಿ ಶೂಟ್‌ಔಟ್ ಮೂಲಕ ಜಯಗಳಿಸಿತ್ತು. 
 
ಆದರೆ ಫ್ರಾನ್ಸ್ ತಂಡವು ಐಲೆಂಡ್ ತಂಡದ ವಿರುದ್ಧ 5-2ರಿಂದ ಸುಲಭವಾಗಿ ಗೆದ್ದಿತ್ತು. ಜರ್ಮನಿ ತಂಡವು ಬ್ಯಾಸ್ಟಿಯನ್ ಸ್ಕ್ವೆನ್‌ಸ್ಟೇಗರ್, ಸಾಮಿ ಕೆದಿರಾ ಮತ್ತು ಗೋಮೆಜ್ ಅವರನ್ನು ಗಾಯಗಳ ಕಾರಣದಿಂದ ಮಿಸ್ ಮಾಡಿಕೊಳ್ಳಲಿದ್ದು ಹಮ್ಮೆಲ್ಸ್ ಅವರಿಗೆ ಹಳದಿ ಕಾರ್ಡ್‌ನಿಂದ ಅಮಾನತುಗೊಳಿಸಲಾಗಿದೆ.

ಫ್ರಾನ್ಸ್ ಕಡೆ ಉತ್ತಮ ಆಟಗಾರರು ಇದ್ದಾರೆಂದು ತಮಗೆ ಗೊತ್ತಿದೆ. ಆದರೆ ಐಲೆಂಡ್ ತಂಡವು ಅಷ್ಟೊಂದು ಚೆನ್ನಾಗಿ ಆಡಲಿಲ್ಲವಾದ್ದರಿಂದ ಫ್ರಾನ್ಸ್ ಸುಲಭ ಗೆಲುವು ಗಳಿಸಿತು. ನಾವು ಚೆನ್ನಾಗಿ ಡಿಫೆಂಡ್ ಮಾಡಿದರೆ ಗೆಲ್ಲಬಹುದೆಂದು ಅನಿಸಿಕೆ ಎಂದು ಮುಲ್ಲರ್ ಪ್ರತಿಕ್ರಿಯಿಸಿದರು. ಕೆಲವು ಆಟಗಾರರು ಮಿಸ್ ಆಗಿದ್ದರೂ ನಾವು ಅದಕ್ಕೆ ಪರಿಹಾರ ಹುಡುಕಿ ಗೆಲ್ಲುವುದಾಗಿ ಮುಲ್ಲರ್ ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ರೊನಾಲ್ಡೊ, ನಾನಿ ಗೋಲುಗಳು: ಪೋರ್ಚು‍‌ಗಲ್ ಯೂರೊ 2016 ಫೈನಲ್‌ಗೆ