Select Your Language

Notifications

webdunia
webdunia
webdunia
webdunia

ಲಯನಲ್ ಮೆಸ್ಸಿಯಿಂದ ನಿವೃತ್ತಿಯ ನಾಟಕ: ಮರಡೋನಾ

ಲಯನಲ್ ಮೆಸ್ಸಿಯಿಂದ ನಿವೃತ್ತಿಯ ನಾಟಕ: ಮರಡೋನಾ
ನವದೆಹಲಿ: , ಶುಕ್ರವಾರ, 26 ಆಗಸ್ಟ್ 2016 (14:49 IST)
ಖ್ಯಾತ ಫುಟ್ಬಾಲ್ ಆಟಗಾರ ಲಯನಲ್ ಮೆಸ್ಸಿಯ ಅರ್ಜೆಂಟೈನಾ ನಿವೃತ್ತಿ ಕುರಿತು ಫುಟ್ಬಾಲ್ ಲೆಜೆಂಡ್ ಡೀಗೊ ಮರಡೋನಾ ಸ್ಫೋಟನಾಕಾರಿ ಹೇಳಿಕೆ ನೀಡಿದ್ದಾರೆ. ಫೈನಲ್‌ ಪಂದ್ಯಗಳಲ್ಲಿ ಸರಣಿ ಸೋಲಿನಿಂದ ಗಮನವನ್ನು ಬೇರೆಡೆ ಸೆಳೆಯಲು ಬಾರ್ಸೆಲೋನಾ ಸ್ಟಾರ್ ಅಂತಾರಾಷ್ಟ್ರೀಯ ನಿವೃತ್ತಿಯ ನಾಟಕವನ್ನು ಆಡಿದರೆಂದು ವಿಶ್ವಕಪ್ ವಿಜೇತ ಮರಡೋನಾ ಟೀಕಿಸಿದರು. 
 
ಮೆಸ್ಸಿ ಟೀಕೆಗಳಿಂದ ತಪ್ಪಿಸಿಕೊಂಡರೂ ಅರ್ಜೆಂಟೈನಾ ಜನರು ನೋವನುಭವಿಸಿದರು. ಮೆಸ್ಸಿ ಮೂರು ಫೈನಲ್ ನಷ್ಟಗಳನ್ನು ಮರೆಯುವುದಕ್ಕಾಗಿ ನಿವೃತ್ತಿಯ ನಾಟಕವಾಡಿರಬಹುದು ಎಂದು ಮರಡೋನಾ ಟಿವೈಸಿ ಸ್ಫೋರ್ಟ್ಸ್‌ಗೆ ತಿಳಿಸಿದರು. 
 
ಚಿಲಿಗೆ ಕೋಪಾ ಅಮೆರಿಕ ಸೆಂಟೆನಾರಿಯೊ ಫೈನಲ್ ಪಂದ್ಯದಲ್ಲಿ ಅರ್ಜಂಟೈನಾ ತಂಡವು ಸೋಲಪ್ಪಿದ ತಕ್ಷಣವೇ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದರು.  ಮೆಸ್ಸಿಯ ಅರ್ಜಂಟೈನಾ ಪ್ರಮುಖ ಪಂದ್ಯಾವಳಿಯ ಫೈನಲ್‌ನಲ್ಲಿ ಸೋತಿದ್ದು ಇದು ಮೂರನೇ ಬಾರಿ. 2014ರ ವಿಶ್ವಕಪ್‌ನಲ್ಲಿ ಜರ್ಮನಿ ವಿರುದ್ಧ ಅದು ಸೋಲನುಭವಿಸಿತ್ತು. 
 
ಆದಾಗ್ಯೂ ಮೆಸ್ಸಿ ತಮ್ಮ ನಿರ್ಧಾರವನ್ನು ಬದಲಿಸಿ ಹೊಸ ಮ್ಯಾನೇಜರ್ ಎಡ್ಗಾರ್ಡೊ ಬೌಜಾ ತಂಡದ ಭಾಗವಾಗಿದ್ದು ಮುಂದಿನ ವಾರ ಉರುಗ್ವೆ ಮತ್ತು ವೆನೆಜುವೆಲಾ ವಿರುದ್ಧ ವಿಶ್ವ ಕಪ್ ಅರ್ಹತಾ ಸುತ್ತಿನ ಪಂದ್ಯವಾಡಲಿದೆ. ಆದಾಗ್ಯೂ ಮರಡೋನಾ ಮೆಸ್ಸಿಯನ್ನು ಟೀಕಿಸಿದ್ದು ಇದೇ ಮೊದಲಲ್ಲ. ಮುಂಚೆಯೂ ಅವರು ಮೆಸ್ಸಿಯಲ್ಲಿ ನಾಯಕತ್ವದ ಗುಣಗಳ ಕೊರತೆಯಿದೆ ಎಂದು ಟೀಕಿಸಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ಉದಾಹರಣೆ ಬಳಸಿಕೊಂಡ ಮಾರ್ಗನ್‌‌ ಅಣಕಕ್ಕೆ ಪಾಕ್ ಪತ್ರಕರ್ತ ತಿರುಗೇಟು