Select Your Language

Notifications

webdunia
webdunia
webdunia
webdunia

ಕೋಪಾ ಅಮೆರಿಕಾ: ಪೆರುಗ್ವೆ ತಂಡವನ್ನು 6-1ರಿಂದ ಅರ್ಜೆಂಟೈನಾ ಧೂಳಿಪಟ

ಕೋಪಾ ಅಮೆರಿಕಾ:  ಪೆರುಗ್ವೆ ತಂಡವನ್ನು 6-1ರಿಂದ ಅರ್ಜೆಂಟೈನಾ ಧೂಳಿಪಟ
ಅರ್ಜೆಂಟೈನಾ , ಬುಧವಾರ, 1 ಜುಲೈ 2015 (16:11 IST)
ಅರ್ಜೆಂಟೈನಾ ಕೋಪಾ ಅಮೆರಿಕಾ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪೆರುಗ್ವೆ ತಂಡವನ್ನು ಮಂಗಳವಾರ 6-1ರಿಂದ ಸೋಲಿಸಿದ್ದು ಆತಿಥೇಯ ಚಿಲಿ ವಿರುದ್ಧ ಫೈನಲ್ ಪಂದ್ಯವನ್ನು ಆಡಲಿದೆ.  ಮೆಸ್ಸಿ ಅವರ ಅದ್ಭುತ ಮಾಂತ್ರಿಕ ಪಾಸ್‌ಗಳಿಂದ ಏಂಜಲ್ ಡಿ ಮಾರಿಯಾ ಎರಡು ಗೋಲು ಗಳಿಸಿದರು ಮತ್ತು ಮಾರ್ಕೋಸ್ ರಾಜೊ , ಜೇವಿಯರ್ ಪಾಸ್ಟೋರ್, ಸರ್ಗಿಯೋ ಆಗೆರೋ ಮತ್ತು ಗೊಂಜಾಲಾ ಹಿಗುಯೇನ್ ತಲಾ ಒಂದು ಗೋಲು ಗಳಿಸಿದರು. 
 
ಲಯೊನೆಲ್ ಮೆಸ್ಸಿ ನೀಡಿದ ಪಾಸೊಂದನ್ನು ಪಾಸ್ಟೋರ್ ಗೋಲ್ ಕೀಪರ್ ಜಸ್ಟೊ ವಿಲ್ಲಾರ್‌ನನ್ನು ವಂಚಿಸಿ ಗೋಲು ಹೊಡೆದರು.  ಪೆರುಗ್ವೆ ಪರ ಡೆರ್ಲಿಜ್ ಗೊಂಜಾಲೆಜ್ ಮತ್ತು ರೋಕ್ವೆ ಸಾಂಟಾ ಕ್ರಜ್ ಇಬ್ಬರೂ ಸ್ಟ್ರೈಕರ್‌ಗಳು ಗಾಯಗೊಂಡಿದ್ದಿಂದ ಪೆರುಗ್ವೆ ತೊಂದರೆಯಲ್ಲಿ ಸಿಲುಕಿತು.
 
ಸಾಂಟಾ ಕ್ರಜ್ ಬದಲಿಗೆ ಆಡಲಿಳಿದ ಲ್ಯೂಕಾಸ್ ಬ್ಯಾರಿಯೋಸ್ ಗೋಲ್ ಹೊಡೆದರಾದರೂ, ಉತ್ತರಾರ್ಧದಲ್ಲಿ ಅರ್ಜೆಂಟೈನಾ ತಂಡವು ತೀಕ್ಷ್ಣ ದಾಳಿ ನಡೆಸಿ ಪೆರುಗ್ವೆಯನ್ನು 6-1ರಿಂದ ಸೋಲಿಸಿತು.
 

Share this Story:

Follow Webdunia kannada