ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ಸೀನಿಯರ್ ವಿಭಾಗದಲ್ಲಿ ಚಿತ್ರಾ ಮಾಗಿಮುಯಿ ರಾಜ್ ತಮ್ಮ ಎದುರಾಳಿಯಾದ ಬೆಲಾರುಸ್ನ ಎಲೆನಾ ಎಸ್ಮೊಲೊವಾರನ್ನು 3-0 ಅಂತರಗಳಿಂದ ಸೋಲಿಸಿದ್ದಾರೆ.
ಕಳೆದ ವಾರ ನಡೆದ ಓಪನ್ ವಿಭಾಗದಲ್ಲಿ ನಿರಾಶದಾಯಕ ಪ್ರದರ್ಶನ ನಿಡಿರುವ ಚಿತ್ರಾ ಸೋಮವಾರ ಎಸ್ಮೊಲೊವಾರನ್ನು 57-32, 76-16, 42-9 ಅಂತರದಿಂದ ಗೆಲುವನ್ನು ಸಾಧಿಸಿ ಪ್ರಶಸ್ತಿ ತಮ್ಮದಾಗಿಸಿಕಕೊಂಡಿದ್ದಾರೆ.
ಇದಕ್ಕು ಮೊದಲು ಸೀನಿಯರ್ ವಿಭಾಗದಲ್ಲಿ ಚಿತ್ರಾರವರು ದೇಶದ ಒಬ್ಬ ಆಟಗಾರ ರೆವಾನಾ ಉಮಾದೇವಿಯವರನ್ನು 2-0 ಅಂತರದಿಂದ ಸೋಲಿಸಿದ್ದರು. ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಚಿತ್ರಾ ಈ ಪಂದ್ಯಾವಳಿಯಲ್ಲಿ ಬ್ರೆಜಿಲ್ನ ಕಾರಮೆಲಿಟಾ ಯೂಮಿಟೊರನ್ನು 2-1 ಅಂತರದಿಂದ ಮತ್ತು ಇಂಗ್ಲೆಂಡ್ನ ಜೆನಿ ಪಾವುಲ್ಟರ್ರನ್ನು 2-1 ಅಂತರದಿಂದ ಸೋಲಿಸಿದ್ದಾರೆ.