Webdunia - Bharat's app for daily news and videos

Install App

ಹಿಂದಿನ ಕಹಿಘಟನೆ ಮರೆತು ಪಯಸ್ ಜತೆ ಸಂಪರ್ಕ: ರೋಹನ್ ಬೋಪಣ್ಣ

Webdunia
ಗುರುವಾರ, 14 ಜುಲೈ 2016 (19:58 IST)
ಹಿಂದಿನದನ್ನು ಮರೆತು ಸಾಧ್ಯವಾದಷ್ಟು ಸಂಪರ್ಕದಲ್ಲಿರುವುದು-ಲಿಯಂಡರ್ ಪಯಸ್ ಜತೆ ಮುಂದಿನ ತಿಂಗಳ ಒಲಿಂಪಿಕ್ಸ್‌ನಲ್ಲಿ ಸಹಯೋಗ ಕುರಿತು ರೋಹನ್ ಬೋಪಣ್ಣ  ಈ ರೀತಿ ಯೋಜಿಸಿದ್ದಾರೆ. ಭಾರತದ ಟೆನ್ನಿಸ್ ರಂಗವನ್ನು ಕಲಕಿದ ಕಹಿಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಬೋಪಣ್ಣ ಭಾವಿಸಿದ್ದಾರೆ.

ಬೋಪಣ್ಣ ಒಲಿಂಪಿಕ್ಸ್‌ನಲ್ಲಿ ಸಾಕೇತ್ ಮೈನೇನಿ ಜತೆ ಡಬಲ್ಸ್ ಆಡಲು ಇಚ್ಛಿಸಿದ್ದರು. ಆದರೆ ಭಾರತ ಟೆನ್ನಿಸ್ ಸಂಸ್ಥೆ ಅದಕ್ಕೆ ಸಮ್ಮತಿಸಲಿಲ್ಲ. ಹೀಗಾಗಿ ಪಯಸ್ ಜತೆ ಒಲಿಂಪಿಕ್ಸ್ ಡಬಲ್ಸ್ ಆಡಬೇಕಾಗಿದೆ.  ''ಕೆಲವು ಪ್ರಸಂಗಗಳನ್ನು ಮರೆಯುವುದೇ ಒಳ್ಳೆಯದು '' ಎಂದು ಬೋಪಣ್ಣ ಅಭಿಪ್ರಾಯಪಟ್ಟರು. ಎಟಿಪಿ ಪ್ರವಾಸದಲ್ಲಿ ಕಠಿಣ ಮತ್ತು ಏಕಾಂಗಿ ಜೀವನವು ಇಂತಹ ಹಿನ್ನಡೆಗಳನ್ನು ತಾಳಿಕೊಳ್ಳಲು ನೆರವಾಗಿದ್ದಾಗಿ ಕ್ರೆಡಿಟ್ ನೀಡಿದರು.

ಬೋಪಣ್ಣ ಮತ್ತು ಪಯಸ್ ಕೊರಿಯಾ ವಿರುದ್ಧ ಡೇವಿಸ್ ಕಪ್ ಡಬಲ್ಸ್ ಆಡಲು ಇಲ್ಲಿಗೆ ಆಗಮಿಸಿದ್ದು, ಶನಿವಾರ ಹಾಂಗ್ ಚುಂಗ್ ಮತ್ತು ಯುನ್ಸೆಯಾಂಗ್ ಚಂಗ್ ಅವರನ್ನು ಎದುರಿಸಲಿದ್ದಾರೆ.
 
 
ನಾವು ಹಿಂದಿನದ್ದನ್ನು ನೆನಸಿಕೊಳ್ಳುತ್ತಾ ಇರುವುದು ಸಾಧ್ಯವಿಲ್ಲ. ಇಂದಿನ ಸನ್ನಿವೇಶವನ್ನು ನೋಡಿ ಮುನ್ನೋಟವನ್ನು ವೀಕ್ಷಿಸಬೇಕು ಎಂದು ಬೋಪಣ್ಣ ಹೇಳಿದರು. ಇಂದಿನ ವಿಷಯ ನಾನು ಮತ್ತು ಲಿಯಾಂಡರ್ ರಿಯೊಗೆ ತೆರಳುವುದು. ನಾವು ಅಭ್ಯಾಸ ಮಾಡುತ್ತಿದ್ದು, ರಿಯೊಗೆ ಮುಂಚೆ ನಮಗೆ ನಾಲ್ಕರಿಂದ ಐದು ದಿನಗಳಿರುತ್ತವೆ. ನಾನು ಟೊರಂಟೊ ಬಳಿಕ ನೇರವಾಗಿ ರಿಯೊಗೆ ತೆರಳುತ್ತೇನೆ. ಲಿಯಾಂಡರ್ ಕೂಡ ಅಲ್ಲಿರುತ್ತಾರೆ. ಆ ಕೆಲವು ದಿನಗಳು ನಾವು ಸಾಧ್ಯವಾದಷ್ಟು ಅಭ್ಯಾಸ ಮಾಡಿ ಸಿದ್ದರಾಗುತ್ತೇವೆ ಎಂದು ಬೋಪಣ್ಣ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Virat Kohli: ಭಾರತ ಪಾಕಿಸ್ತಾನ ಬಗ್ಗೆ ಕೊನೆಗೂ ತುಟಿಬಿಚ್ಚಿದ ವಿರಾಟ್ ಕೊಹ್ಲಿ ಹೇಳಿದ್ದೇನು

IPL 2025: ಐಪಿಎಲ್ 2025 ರದ್ದುಗೊಳಿಸಿದ ಬಿಸಿಸಿಐ

Jay Shah: ಅಪ್ಪ ನಂಗೂ ಒಂದು ಮಿಸೈಲ್ ಕೊಡು ಎಂದು ರಾವಲ್ಪಿಂಡಿಗೆ ಹೊಡೆದ ಜಯ್ ಶಾ

ಮುಂದಿನ ಸುದ್ದಿ
Show comments