ದೋಹಾ: ಭಾರತೀಯ ಫುಟ್ ಬಾಲ್ ಗೆ ಇಂದು ವಿಶೇಷ ದಿನ. ದೋಹಾದಲ್ಲಿ ಬೆಂಗಳೂರು ಫುಟ್ ಬಾಲ್ ಕ್ಲಬ್, ಏಷ್ಯನ್ ಫುಟ್ ಬಾಲ್ ಮಹಾ ಒಕ್ಕೂಟದ ಎಫ್ ಸಿ ಕಪ್-2016 ರ ಅಂತಿಮ ಪಂದ್ಯದಲ್ಲಿ ಇಂದು ರಾತ್ರಿ ಇರಾಕ್ ನ ಅಲ್ ಖವಾತ್ ಅಲ್ ಜವಿಯಾ ತಂಡದೊಂದಿಗೆ ಸೆಣಸಾಡಲಿದೆ.
ಒಟ್ಟು 23 ದೇಶಗಳ 40 ಕ್ಲಬ್ ತಂಡಗಳು ಕೂಟದಲ್ಲಿ ಭಾಗವಹಿಸುತ್ತಿದ್ದು, ಇದರಲ್ಲಿ ಗೆದ್ದವರು ಏಷ್ಯಾದ ದೈತ್ಯ ಫುಟ್ ಬಾಲ್ ತಂಡವಾಗಿ ಹೊರಹೊಮ್ಮಲಿದೆ. ಈ ಕೂಟದಲ್ಲಿ ಇದುವರೆಗೆ ಭಾರತದ ಇತರ ತಂಡಗಳಾದ ಮೋಹನ್ ಬಗಾನ್, ಈಸ್ಟ್ ಬೆಂಗಾಲ್ ನಂತಹ ತಂಡಗಳು ಭಾಗವಹಿಸಿದ್ದವು. ಆದರೆ ಫೈನಲ್ ತಲುಪಿದ ಸಾಧನೆ ಮಾಡಿರಲಿಲ್ಲ.
ಹೀಗಾಗಿ ಇಂದು ಗೆದ್ದರೆ ನಮ್ಮ ಬೆಂಗಳೂರು ತಂಡ ಇತಿಹಾಸ ನಿರ್ಮಿಸಲಿದೆ. ಈಗಾಗಲೇ ಭಾರತದಲ್ಲೂ ಫುಟ್ ಬಾಲ್ ಬಗ್ಗೆ ಕ್ರೇಜ್ ಹೆಚ್ಚಾಗುತ್ತಿದ್ದು, ಬೆಂಗಳೂರು ತಂಡ ಗೆದ್ದ ಮೇಲಾದರೂ, ವಿಶ್ವದ ಇತರ ರಾಷ್ಟ್ರಗಳು ಭಾರತವನ್ನು ಈ ಕ್ರೀಡೆಯಲ್ಲಿ ಗುರುತಿಸುವಂತಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ