Select Your Language

Notifications

webdunia
webdunia
webdunia
webdunia

ಬ್ಯಾಡ್ಮಿಂಟನ್: ಪಿ.ವಿ.ಸಿಂಧುಗೆ ಮತ್ತೆ ಬಡ್ತಿ ಸಿಕ್ತು

ಬ್ಯಾಡ್ಮಿಂಟನ್: ಪಿ.ವಿ.ಸಿಂಧುಗೆ ಮತ್ತೆ ಬಡ್ತಿ ಸಿಕ್ತು
NewDelhi , ಶನಿವಾರ, 3 ಡಿಸೆಂಬರ್ 2016 (09:25 IST)
ನವದೆಹಲಿ: ಭರ್ಜರಿ ಫಾರ್ಮ್ ನಲ್ಲಿರುವ ಪಿ.ವಿ.ಸಿಂಧು ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಎರಡು ಸ್ಥಾನ ಮೇಲಕ್ಕೇರಿದ್ದು, 7 ನೇ ಸ್ಥಾನ ಪಡೆದುಕೊಂಡಿದ್ದಾರೆ. ಚೀನಾ ಓಪನ್ ಸೀರೀಸ್ ಗೆಲುವು, ಹಾಂಗ್ ಕಾಂಗ್ ಓಪನ್ ರನ್ನರ್ ಅಪ್ ಸಾಧನೆ ಸಿಂಧುಗೆ ಈ ಬಡ್ತಿ ಸಿಗುವಂತೆ ಮಾಡಿದೆ.

ಇದು ಅವರ ಜೀವನ ಶ್ರೇಷ್ಠ ಸಾಧನೆಯಾಗಿದೆ. ಮಕಾವ್ ಓಪನ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸೈನಾ ನೆಹ್ವಾಲ್ ಮತ್ತೆ ಅಗ್ರ ಹತ್ತರೊಳಗೆ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಇದಕ್ಕೂ ಮೊದಲು ಸೈನಾ 11 ನೇ ಸ್ಥಾನದಲ್ಲಿದ್ದರು.

ಕಳೆದ ಎರಡು ಸೂಪರ್ ಸೀರೀಸ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸಿಂಧು ವಿಶ್ವ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಗೂ ಅವಕಾಶ ಪಡೆದಿದ್ದಾರೆ. ಒಟ್ಟು ಎಂಟು ಆಟಗಾರರಿಗೆ ಮಾತ್ರ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಎದುರಿಸಿದ ಅತ್ಯುತ್ತಮ ವೇಗದ ಬೌಲರ್ ಇವರಂತೆ