Select Your Language

Notifications

webdunia
webdunia
webdunia
webdunia

ಟೆಸ್ಟ್, ವಿಶ್ವ ಟಿ 20 ಪಂದ್ಯಗಳಲ್ಲಿ ಬೆಟ್ಟಿಂಗ್: 3 ಮಹಿಳಾ ಕ್ರಿಕೆಟರುಗಳಿಗೆ ನಿಷೇಧ

ಟೆಸ್ಟ್, ವಿಶ್ವ ಟಿ 20 ಪಂದ್ಯಗಳಲ್ಲಿ ಬೆಟ್ಟಿಂಗ್: 3 ಮಹಿಳಾ ಕ್ರಿಕೆಟರುಗಳಿಗೆ ನಿಷೇಧ
ಮೆಲ್ಬರ್ನ್: , ಗುರುವಾರ, 7 ಜುಲೈ 2016 (13:53 IST)
ಪಂದ್ಯಗಳ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಮೂವರು ಆಟಗಾರರನ್ನು ಕ್ರಿಕೆಟ್ ಆಸ್ಟ್ರೇಲಿಯಾ ನಿಷೇಧಿಸಿದೆ. ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಈ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಆಟಗಾರರಾದ ಹೇಯ್ಲೆ ಜೆನ್ಸನ್(ವಿಕ್ಟೋರಿಯಾ), ಕಾರಿನ್ ಹಾಲ್(ಟಾಸ್ಮಾನಿಯಾ) ಮತ್ತು ಜೋಯಿಲ್ ಲೋಗಾನ್(ದಕ್ಷಿಣ ಆಸ್ಟ್ರೇಲಿಯಾ) ಅವರು ಸಂಹಿತೆಯ 2.2.1 ವಿಧಿಯನ್ನು ಉಲ್ಲಂಘಿಸಿದ ಆರೋಪ ಮಾಡಲಾಗಿದೆ.
 
 ಸಿಎ ವಿಧಿಸಿದ ದಿಗ್ಬಂಧನಗಳನ್ನು ಮೂವರು ಆಟಗಾರರು ಸ್ವಯಂಪ್ರೇರಣೆಯಿಂದ ಒಪ್ಪಿದ್ದಾರೆ. ಜೆನ್ಸನ್ 2015ರ ನವೆಂಬರ್ 5-9ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಟೆಸ್ಟ್ ಪಂದ್ಯದ ಫಲಿತಾಂಶದ ಬಗ್ಗೆ ಒಂದು ಬೆಟ್ ಕಟ್ಟಿದ್ದರು. ಹಾಲ್ ಕೂಡ ಪುರುಷರ ಏಕ ದಿನ ಸ್ಪರ್ಧೆಯ ಎರಡು ಪಂದ್ಯಗಳಲ್ಲಿ 2 ಬೆಟ್‌ಗಳನ್ನು ಕಟ್ಟಿದ ಆರೋಪ ಎದುರಿಸಿದ್ದಾರೆ.
 
2016ರ ಮಾರ್ಚ್ ಐಸಿಸಿ ವಿಶ್ವ ಟ್ವೆಂಟಿ 20 ಪಂದ್ಯಾವಳಿ ಜಯಕ್ಕೆ ಸಂಬಂಧಿಸಿ ಲೋಗಾನ್ ಬೆಟ್ಟಿಂಗ್ ಮಾರ್ಕೆಟ್‌ನಲ್ಲಿ ಎರಡು ಬೆಟ್ಟಿಂಗ್‌ಗಳನ್ನು ಕಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಮಹಿಳೆಯರ ಬಿಗ್ ಬ್ಯಾಷ್ ಲೀಗ್ ಆಟಗಾರರಾದ ಜೆನ್ಸನ್ ಮತ್ತು ಹಾಲ್ ಅವರಿಗೆ 24 ತಿಂಗಳ ಅನರ್ಹತೆ ಅವಧಿ ಇರಿಸಲಾಗಿದ್ದು, ಅದರಲ್ಲಿ  18 ತಿಂಗಳು ಅಮಾನತಿನ ಶಿಕ್ಷೆ ನೀಡಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿಗೆ 35 ವರ್ಷ ತುಂಬಿದ ಮಹೇಂದ್ರ ಸಿಂಗ್ ಧೋನಿ