Select Your Language

Notifications

webdunia
webdunia
webdunia
webdunia

ಅಮಿತ್ ಮಿಶ್ರಾ 4 ವಿಕೆಟ್: ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವನ್ ವಿರುದ್ಧ ಪಂದ್ಯ ಡ್ರಾ

ಅಮಿತ್ ಮಿಶ್ರಾ 4 ವಿಕೆಟ್: ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವನ್ ವಿರುದ್ಧ ಪಂದ್ಯ ಡ್ರಾ
ಸೇಂಟ್ ಕಿಟ್ಸ್ , ಸೋಮವಾರ, 11 ಜುಲೈ 2016 (12:20 IST)
ಭಾರತ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವನ್ ನಡುವೆ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ದಿನದಾಟ ಮುಗಿದಾಗ 7 ವಿಕೆಟ್‌ಗೆ 281 ರನ್ ಗಳಿಸಿ ಪಂದ್ಯ ಡ್ರಾನಲ್ಲಿ ಮುಕ್ತಾಯ ಕಂಡಿದೆ. ಮೊದಲ ದಿನ ಪ್ರವಾಸಿ ತಂಡ ಭಾರತ 258ಕ್ಕೆ 6 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಘೋಷಿಸಿತು. ಎರಡನೇ ದಿನ ಅಧ್ಯಕ್ಷರ ಇಲೆವನ್ ಪರ ಶಾಯ್ ಹೋಪ್( 118 ನಾಟೌಟ್) ಅಜೇಯ ಶತಕ ಬಾರಿಸಿದ್ದು ಅದರಲ್ಲಿ 15 ಬೌಂಡರಿಗಳು ಸೇರಿದ್ದವು.
 
ಆರಂಭಿಕ ಆಟಗಾರ ರಾಜೇಂದ್ರ ಚಂದ್ರಿಕಾ ಅಮೂಲ್ಯ 69 ರನ್ ಸ್ಕೋರ್ ಮಾಡಿದರೆ ಹೋಪ್ ಅವರೊಂದಿಗೆ ಎರಡನೇ ವಿಕೆಟ್‌ಗೆ 122 ರನ್ ಜತೆಯಾಟವಾಡಿದರು. ಭಾರತದ ವೇಗಿಗಳಾದ ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ಮತ್ತು ಶಮಿ ತಲಾ ಒಂದು ವಿಕೆಟ್ ಗಳಿಸಿದರೂ ಕೂಡ ವಿರಾಟ್ ಕೊಹ್ಲಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ಬೌಲಿಂಗ್‌ಗೆ ಇಳಿಸಿದಾಗ ಪಂದ್ಯ ತಿರುವು ಪಡೆಯಿತು. ಮಿಶ್ರಾ 27 ಓವರುಗಳಲ್ಲಿ 4 ವಿಕೆಟ್ ಕಬಳಿಸಿ, ಕೇವಲ 67 ರನ್ ಕೊಟ್ಟರು.
 
 ಜೊಮೆಲ್ ವಾರಿಕನ್ ಅರ್ಧಶತಕ ಗಳಿಸಿರದಿದ್ದರೆ ಸ್ವದೇಶಿ ತಂಡ ಬೌಲ್ಡ್ ಔಟ್ ಆಗುವ ಸಾಧ್ಯತೆಯಿತ್ತು. ಇದು ಅಧ್ಯಕ್ಷರ ಇಲೆವನನ್ ಭಾರತದ ಸ್ಕೋರನ್ನು ದಾಟಿ ಸಾಗಲು ನೆರವಾಯಿತು.  ಜುಲೈ 14ರಿಂದ 16ರವರೆಗೆ ಎರಡು ತಂಡಗಳು ಇನ್ನೊಂದು ಅಭ್ಯಾಸ ಪಂದ್ಯವನ್ನು ಆಡಲಿದೆ.
 
 ಸ್ಕೋರು ವಿವರ
ಭಾರತ ಮೊದಲ ಇನ್ನಿಂಗ್ಸ್:  258ಕ್ಕೆ 6 ವಿಕೆಟ್ ಡಿಕ್ಲೇರ್ಡ್
ಲೋಕೇಶ್ ರಾಹುಲ್ ರಿಟೈರ್ಡ್ ಔಟ್ 50, ಶಿಖರ್ ಧವನ್ ರಿಟೈರ್ಡ್ ಔಟ್ 51, ವಿರಾಟ್ ಕೊಹ್ಲಿ 14, ರೋಹಿತ್ ಶರ್ಮಾ 54.
ಜೋಮೆಲ್ ವಾರಿಕನ್ 2 ವಿಕೆಟ್, ಜ್ಯಾಕೋಬ್ಸ್ 1 ವಿಕೆಟ್
 ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವನ್ 281ಕ್ಕೆ 7 ವಿಕೆಟ್
ರಾಜೇಂದ್ರ ಚಂದ್ರಿಕಾ 69 ರನ್, ಶಾಯ್ ಹೋಪ್ 118 ರನ್, ವಾರಿಕನ್ ಅಜೇಯ 50 ರನ್
ಅಮಿತ್ ಮಿಶ್ರಾ 4 ವಿಕೆಟ್, ಭುವನೇಶ್ವರ್ ಕುಮಾರ್ 1 ವಿಕೆಟ್, ಶಮಿ  1 ವಿಕೆಟ್, ಉಮೇಶ್ ಯಾದವ್ 1 ವಿಕೆಟ್

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೊನಾಲ್ಡೊ ಭವಿಷ್ಯವನ್ನು ನಿಜವಾಗಿಸಿದ ಎಡೆರ್