Select Your Language

Notifications

webdunia
webdunia
webdunia
webdunia

ಕಾರ್ಲ್‌ಸನ್ ಮತ್ತೆ ವಿಶ್ವ ಚೆಸ್ ಚಾಂಪಿಯನ್ : ಆನಂದ್‌ಗೆ ಸೋಲು

ಕಾರ್ಲ್‌ಸನ್ ಮತ್ತೆ ವಿಶ್ವ ಚೆಸ್ ಚಾಂಪಿಯನ್ : ಆನಂದ್‌ಗೆ ಸೋಲು
ಸೋಚಿ , ಸೋಮವಾರ, 24 ನವೆಂಬರ್ 2014 (12:15 IST)
ವಿಶ್ವ ಚೆಸ್ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್  ತಮ್ಮ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದು, ಭಾರತದ ಎದುರಾಳಿ ವಿಶ್ವನಾಥ್ ಆನಂದ್ ವಿರುದ್ಧ ಭಾನುವಾರ 11ನೇ ಸುತ್ತಿನಲ್ಲಿ ಜಯಗಳಿಸುವ ಮೂಲಕ ಪುನಃ ವಿಶ್ವ ಚೆಸ್  ಚಾಂಪಿಯನ್‌ಷಿಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

24ನೇ ನಡೆಯಲ್ಲಿ ಆನಂದ್ ಅವರ ವಿನಿಮಯ/ ಸ್ಯಾಕ್ರಿಫೈಸ್ ಪ್ರಮಾದವನ್ನು ಅನುಕೂಲಕ್ಕೆ ಬಳಸಿಕೊಂಡು 45 ನಡೆಗಳಲ್ಲಿ ಕಾರ್ಲ್‌ಸನ್  ಜಯಸಾಧಿಸಿದರು. ಆನಂದ್ ಅನುಕೂಲದ ಸ್ಥಿತಿಯಲ್ಲಿದ್ದಾಗ ವಿನಿಮಯ-ಸ್ಯಾಕ್ರಿಫೈಸ್ ದುಸ್ಸಾಹಸಕ್ಕೆ ಇಳಿದು  ಕಾರ್ಲ್‌ಸನ್ ಬಿಶಪ್ ಬದಲಿಗೆ ಆನಂದ್  ತಮ್ಮ ಆನೆಯನ್ನು  ತ್ಯಾಗ ಮಾಡಿದರು.
 
 ಆದರೆ ಆನಂದ್ ಕಾರ್ಯಯೋಜನೆ ಅವರಿಗೆ ತಿರುಗೇಟು ನೀಡಿತು. 31ನೇ ನಡೆಯಲ್ಲಿ ಕಾರ್ಲ್‌ಸನ್ ಕುದುರೆ ವಿನಿಮಯದ ಮೂಲಕ ಸ್ಥಾನವನ್ನು ಸರಳಗೊಳಿಸಿದರು. ಇದರಿಂದ ಆನಂದ್ ಆಟದ ಅಂತ್ಯಕಾಲ ಸಮೀಪಿಸಿತು.ಕಾರ್ಲ್‌ಸನ್ 6.5 ಪಾಯಿಂಟ್‌ಗಳನ್ನು ಗೆದ್ದು ಕಳೆದ ವರ್ಷ ಆನಂದ್ ಅವರಿಂದ ಕಸಿದುಕೊಂಡಿದ್ದ ವಿಶ್ವ ಕಪ್ ಪ್ರಶಸ್ತಿಯನ್ನು ಮತ್ತೆ ಉಳಿಸಿಕೊಂಡರು. 

Share this Story:

Follow Webdunia kannada