Select Your Language

Notifications

webdunia
webdunia
webdunia
webdunia

ವಿಶ್ವನಾಥನ್‌ ಆನಂದ್‌‌ಗೆ ಅಮ್ಮನ ಅಗಲಿಕೆ

ವಿಶ್ವನಾಥನ್‌ ಆನಂದ್‌‌ಗೆ ಅಮ್ಮನ ಅಗಲಿಕೆ
ಚೆನ್ನೈ , ಗುರುವಾರ, 28 ಮೇ 2015 (17:28 IST)
ಮಾಜಿ ಚೆಸ್‌ ವಿಶ್ವಚಾಂಪಿಯನ್‌, ವಿಶ್ವನಾಥನ್‌ ಆನಂದ್‌ ಅವರ ತಾಯಿ ಸುಶೀಲಾ ವಿಶ್ವನಾಥನ್‌ ಬುಧವಾರ ಕೊನೆಯುಸಿರೆಳೆದಿದ್ದಾರೆ. ಚೆನ್ನೈನ ನಿವಾಸದಲ್ಲಿ ನಿದ್ರಿಸುತ್ತಿದ್ದಾಗಲೇ ಅವರು ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
 
ನಿವೃತ್ತ ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಆಗಿರುವ ಪತಿ ಕೆ.ವಿಶ್ವನಾಥನ್‌, ಆನಂದ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. 
 
ವಿಶ್ವನಾಥನ್‌ ಆನಂದ್‌ ಅವರು ವಿಶ್ವ ಮಟ್ಟದಲ್ಲಿ ಕೀರ್ತಿ ಸಾಧಿಸಲು ಮೂಲ ಕಾರಣ, ಪ್ರೇರಣೆ ಅವರೇ ಆಗಿದ್ದರು. ಬಾಲ್ಯದಲ್ಲಿ ಮಗನಿಗೆ ಚೆಸ್‌ನ ಮೂಲಪಾಠಗಳನ್ನು ಮೊದಲ ಬಾರಿಗೆ ಹೇಳಿಕೊಟ್ಟಿದ್ದೇ ತಾಯಿ ಸುಶೀಲಾ.  ಬಾಲ್ಯದಲ್ಲಿ ಆನಂದ್ ಅವರಿಗೆ ಆಟದಲ್ಲಿ ಅಮ್ಮನೇ ಪ್ರಬಲ ಎದುರಾಳಿಯಾಗಿದ್ದರು. ಅವರು ನೈಪುಣ್ಯತೆ ಸಾಧಿಸುವಲ್ಲಿ ಅವರ ತಾಯಿ ಪ್ರಮುಖ ಪಾತ್ರ ವಹಿಸಿದ್ದರು.
 
ಸುಶೀಲಾ ಅವರ ನಿಧನಕ್ಕೆ ಅಖಿಲ ಭಾರತ ಚೆಸ್‌ ಫೆಡರೇಷನ್‌ ಅಧ್ಯಕ್ಷ ಪಿ.ಆರ್‌.ವೆಂಕಟರಾಮ ರಾಜ ಸಂತಾಪ ವ್ಯಕ್ತಪಡಿಸಿದ್ದಾರೆ.
 
ಈ ಕುರಿತು ಪ್ರತಿಕ್ರಿಯಿಸಿರುವ ಗ್ರ್ಯಾಂಡ್ ಮಾಸ್ಟರ್ ಆರ್. ಬಿ ರಮೇಶ್, "ಆನಂದ್ ಇಲ್ಲದೇ ಭಾರತೀಯ ಚೆಸ್‌ನ್ನು ಕಲ್ಪಿಸಿಕೊಳ್ಳುವುದು ಕಷ್ಟ, ಅವರಮ್ಮನನ್ನು ಹೊರತು ಪಡಿಸಿ ಆನಂದ‌ನನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟ",  ಎಂದಿದ್ದಾರೆ. 

Share this Story:

Follow Webdunia kannada