Select Your Language

Notifications

webdunia
webdunia
webdunia
webdunia

ಮುಂದಿನ ವರ್ಷ ಮದುವೆಯಾಗಲಿದ್ದೇವೆ: ದಿನೇಶ್ ಕಾರ್ತಿಕ್ - ದೀಪಿಕಾ ಪಳ್ಳಿಕಲ್

ಮುಂದಿನ ವರ್ಷ ಮದುವೆಯಾಗಲಿದ್ದೇವೆ: ದಿನೇಶ್ ಕಾರ್ತಿಕ್ - ದೀಪಿಕಾ ಪಳ್ಳಿಕಲ್
ನವದೆಹಲಿ , ಗುರುವಾರ, 9 ಅಕ್ಟೋಬರ್ 2014 (12:20 IST)
ಎರಡು ವರ್ಷಗಳ ಕಾಲ ಒಟ್ಟಿಗೆ ಇದ್ದ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮತ್ತು ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ಮುಂದಿನ ವರ್ಷ ಜೂನ್ ತಿಂಗಳಲ್ಲಿ ತಾವಿಬ್ಬರು ಮದುವೆಯಾಗುವುದಾಗಿ ತಿಳಿಸಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

ದೀಪಿಕಾ ಕೆಲ ದಿನಗಳ ಹಿಂದೆ ಟ್ವಿಟರ್‌ನಲ್ಲಿ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದರು. ಆದರೆ ಈ ಬಾರಿ ಸ್ವತಃ ದಿನೇಶ್ ಕಾರ್ತಿಕ್ ತಾವು ವಿವಾಹ ಬಂಧನಕ್ಕೆ ಒಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
 
''ನಾವು ಮದುವೆಗೆ ಸಜ್ಜಾಗಿದ್ದೇವೆ, ಈಗ ಹೆಚ್ಚು ಕಡಿಮೆ ಮದುವೆ ದಿನಾಂಕ ಕೂಡ ಅಂತಿಮಗೊಂಡಿದೆ. ಅವಳು ಮೊದಲಿನಿಂದಲೂ ಮದುವೆಗೆ ಒತ್ತಾಯಿಸುತ್ತಿದ್ದಳು. ಈಗ ಮೊದಲಿಗಿಂತಲೂ ಒಬ್ಬರನೊಬ್ಬರು ಅರಿತುಕೊಂಡಿದ್ದೇವೆ. ಹಾಗಾಗಿ ಮದುವೆಗೆ ಸಜ್ಜಾಗಿದ್ದೇವೆ, ಯಾವುದೇ ಭಯವಿಲ್ಲ,'' ಎಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಕಾರ್ತಿಕ್ ಹೇಳಿದ್ದಾರೆ.
 
ಇಬ್ಬರು ಈ ವರ್ಷ ತಮ್ಮತಮ್ಮ ಆಟಗಳಲ್ಲಿ ವ್ಯಸ್ತರಾಗಿದ್ದರಿಂದ ಮದುವೆ ಮಾಡಿಕೊಳ್ಳಲಾಗಲಿಲ್ಲ. ಮುಖ್ಯವಾಗಿ ದೀಪಿಕಾ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಕಡೆ ದೃಷ್ಟಿ ನೆಟ್ಟಿದ್ದರು. ದೀಪಿಕಾ ಈ ಬಾರಿ ಒಟ್ಟು ಮೂರು ಅಂತಾರಾಷ್ಟ್ರೀಯ ಪದಕ ಗೆದ್ದಿರುತ್ತಾರೆ.
 
''ನಮ್ಮ ಸಂಬಂಧ ಹೇಗೆ ಬೆಳೆಯಿತು ಎಂಬುದರ ಬಗ್ಗೆ ಪುನರಾವರ್ತಿಸಲಾರೆ.  ನಾನು ಭವಿಷ್ಯದ ಬಗ್ಗೆ ಗಮನ ನೀಡುತ್ತಿದ್ದೇನೆ.ಇದು ನನ್ನ ಕ್ರೀಡಾ ಬದುಕಿನ ಮಹೋನ್ನತ ವರ್ಷ.ದಿನೇಶ್ ಜತೆಗಿನ ಕಳೆದ ಒಂದುವರೆ ವರ್ಷ ವಿಶೇಷವಾಗಿತ್ತು.  ಇನ್ನೂ ಉತ್ತಮ ದಿನಗಳ ನಿರೀಕ್ಷೆಯಲ್ಲಿ ನಾನಿದ್ದೇನೆ '' ಎಂದು ದೀಪಿಕಾ ಹೇಳಿದ್ದಾರೆ. 

Share this Story:

Follow Webdunia kannada