Select Your Language

Notifications

webdunia
webdunia
webdunia
webdunia

ಸಾನಿಯಾಗೆ ಸೋನಿಯಾ ಅಭಿನಂದನೆ

ಸಾನಿಯಾಗೆ ಸೋನಿಯಾ ಅಭಿನಂದನೆ
ನವದೆಹಲಿ , ಸೋಮವಾರ, 13 ಏಪ್ರಿಲ್ 2015 (18:06 IST)
ಡಬ್ಲ್ಯೂಟಿಎ ಶ್ರೇಯಾಂಕ ಪಟ್ಟಿಯಲ್ಲಿ ಉನ್ನತ ಸ್ಥಾನಕ್ಕೇರಿದ ಪ್ರಥಮ ಮಹಿಳಾ ಟೆನಿಸ್ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗುವ ಮೂಲಕ ಇತಿಹಾಸ ರಚಿಸಿರುವ ಸಾನಿಯಾ ಮಿರ್ಜಾ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ. 

ಸಂಪೂರ್ಣ ದೇಶಕ್ಕೆ ಸಾನಿಯಾ ಹೆಮ್ಮೆ ತಂದಿದ್ದಾರೆ ಎಂದು ತಮ್ಮ ಸಂದೇಶದಲ್ಲಿ ಹೇಳಿರುವ ಸೋನಿಯಾರವರು ಆಟಗಾರ್ತಿಯ ಬದ್ಧತೆ ಮತ್ತು ದೃಢ ಸಂಕಲ್ಪವನ್ನು  ಶ್ಲಾಘಿಸಿದ್ದಾರೆ. 
 
ಡಬ್ಲ್ಯೂಟಿಎ ಪ್ರಕಟಿಸಿದ ಟೆನಿಸ್ ಶ್ರೇಯಾಂಕ ಪಟ್ಟಿಯಲ್ಲಿ ಮಾರ್ಟಿನಾ ಹಿಂಗಿಸ್ ಜತೆಯಾಗಿ ವಿಶ್ವದಲ್ಲೇ ನಂ .1 ಸ್ಥಾನ ಪಡೆಯುವ ಮೂಲಕ ಸಾನಿಯಾ ಭಾನುವಾರ ಇತಿಹಾಸ ಸೃಷ್ಟಿಸಿದರು. ಡಬ್ಲ್ಯುಟಿಎ ಫ್ಯಾಮಿಲಿ ಸರ್ಕಲ್ ಕಪ್‌ನಲ್ಲಿ ಜೊತೆಗಾರ್ತಿ ಮಾರ್ಟಿನಾ ಹಿಂಗಿಸ್ ಜೊತೆ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. 
 
ಟಾಪ್ ಸೀಡ್‌ನ ಭಾರತ-ಸ್ವಿಸ್ ಜೋಡಿ ಕ್ಯಾಸಿ ಡೆಲೇಕಾ ಮತ್ತು ಡಾರಿಜಾ ಜುರಾಕ್ ವಿರುದ್ಧ 6-0 ಮತ್ತು 6-4ರಲ್ಲಿ ಸೋಲಿಸಿ 731,000 ಡಾಲರ್ ಮೌಲ್ಯದ ಫೈನಲ್‌ನಲ್ಲಿ ಜಯಗಳಿಸಿತು.
 
ಸಾನಿಯಾ ಈ ಜಯದಿಂದ 470 ಪಾಯಿಂಟ್ ಗಳಿಸಿದ್ದು, ತಮ್ಮ ಟ್ಯಾಲಿಯನ್ನು 7965ಕ್ಕೆ ಒಯ್ದರು. ಇಟಲಿಯ ಸಾರಾ ಇರಾನಿ(7640) ಮತ್ತು ರಾಬರ್ಟೋ ವಿನ್ಸಿ (7640) ಅವರನ್ನು ಹಿಂದಿಕ್ಕಿದ  ಸಾನಿಯಾ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.
 
ಈ ಮೊದಲು ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಪುರುಷರ ಡಬಲ್ಸ್‌ನಲ್ಲಿ ಅಗ್ರಸ್ಥಾನವನ್ನು ಸಾಧಿಸಿದ್ದರು. 

Share this Story:

Follow Webdunia kannada