Select Your Language

Notifications

webdunia
webdunia
webdunia
webdunia

ಶಾಂಘೈ ಚಾಲೆಂಜರ್‌: ಸೋಮದೇವ್ ದೇವವರ್ಮನ್ ಫೈನಲ್‌ಗೆ ಲಗ್ಗೆ

ಶಾಂಘೈ ಚಾಲೆಂಜರ್‌: ಸೋಮದೇವ್ ದೇವವರ್ಮನ್ ಫೈನಲ್‌ಗೆ ಲಗ್ಗೆ
ಶಾಂಘೈ , ಭಾನುವಾರ, 7 ಸೆಪ್ಟಂಬರ್ 2014 (13:29 IST)
ಸಿಂಗಲ್ಸ್‌ ಹಾಗೂ ಡಬಲ್ಸ್‌ ವಿಭಾಗದ ಪಂದ್ಯಗಳಲ್ಲಿ ಮಿಂಚು ಹರಿಸಿದ ಭಾರತದ ಸೋಮದೇವ್‌ ದೇವವರ್ಮನ್‌  ಇಲ್ಲಿ ನಡೆಯುತ್ತಿರುವ ಎಟಿಪಿ ಶಾಂಘೈ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
 
ಶನಿವಾರ ನಡೆದ ಸಿಂಗಲ್ಸ್‌ ವಿಭಾಗದ  ಸೆಮಿಫೈನಲ್‌ ಹೋರಾಟ ದಲ್ಲಿ ಸೋಮದೇವ್‌ 1–6, 6–4, 6–4ರಲ್ಲಿ ಇಟಲಿಯ ಲ್ಯೂಕಾ  ವಾನ್ನಿ ಎದುರು ಜಯಭೇರಿ ಮೊಳಗಿಸಿದರು. ಈ ವರ್ಷದ ಆರಂಭದಲ್ಲಿ ನಡೆದ ದೆಹಲಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಆಟಗಾರ ಪ್ರಶಸ್ತಿ ಜಯಿಸಿ ದ್ದರು. ಆ ಬಳಿಕ ನಡೆದ ಹಲವು ಟೂರ್ನಿಗಳಲ್ಲಿ ವೈಫಲ್ಯ ಅನುಭವಿಸಿದ್ದ ಅವರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು.
 
ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡುವ ಮೂಲಕ  ಗೆಲುವಿನ ಹಾದಿಗೆ ಮರಳಿದ್ದ ಸೋಮದೇವ್‌  ಶನಿವಾರದ ಪಂದ್ಯ ದಲ್ಲೂ ಕೆಚ್ಚಿನ ಆಟ ತೋರಿದರು. ಎರಡು ಗಂಟೆ 14 ನಿಮಿಷಗಳ ಕಾಲ ನಡೆದ ಹೋರಾಟದ ಮೊದಲ ಸೆಟ್‌ನಲ್ಲಿ ಇಟಲಿಯ ಆಟಗಾರ ಸೊಗ ಸಾದ ಪ್ರದರ್ಶನ ನೀಡಿ ಗೆಲುವು ತಮ್ಮದಾಗಿಸಿಕೊಂಡರು.
 
ಬಳಿಕ ಲಯ ಕಂಡುಕೊಂಡ  ಸೋಮದೇವ್‌ ಚುರುಕಿನ ಆಟದ ಮೂಲಕ ಗಮನ ಸೆಳೆದರು. ವೇಗದ ಸರ್ವ್‌ ಹಾಗೂ ಬಲಿಷ್ಠ ರಿಟರ್ನ್‌ಗಳ ಮೂಲಕ ಎದುರಾಳಿ ಆಟಗಾರನನ್ನು ತಬ್ಬಿಬ್ಬುಗೊಳಿಸಿದ ಅವರು ಸೆಟ್‌ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯಕ ಸೆಟ್‌ನಲ್ಲೂ  ಚಾಕಚಕ್ಯತೆ ಮೆರೆದ ಭಾರತದ ಆಟಗಾರ ಮನಮೋಹಕ ಆಟದ ಮೂಲಕ ಗೆಲುವಿನ ಸವಿಯುಂಡರು.
 
ಡಬಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ: ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಸನಮ್‌ ಸಿಂಗ್‌ ಜೊತೆಗೂಡಿ ಆಡಿದ ಸೋಮದೇವ್‌ ಪ್ರಶಸ್ತಿ ಸುತ್ತು ತಲುಪಿದ್ದಾರೆ. 
 
ದಿವಿಜ್‌ ಜೋಡಿಗೆ ಜಯ: ಪುರುಷರ ಡಬಲ್ಸ್‌ ವಿಭಾಗದ ಎರಡನೇ ಸೆಮಿಫೈನಲ್‌ನಲ್ಲಿ ಭಾರತದ  ಯೂಕಿ ಭಾಂಬ್ರಿ ಮತ್ತು ದಿವಿಜ್‌ ಶರಣ್‌ 7–6, 7–6ರಲ್ಲಿ ಚೀನಾ ತೈಪೆಯ ತಿ ಚೆನ್‌ ಮತ್ತು ಹ್ಸೀನ್‌ ಯಿನ್‌ ಪೆಂಗ್‌  ಅವರನ್ನು ಪರಾಭವಗೊಳಿಸಿದರು. ಭಾನುವಾರ ನಡೆಯುವ ಫೈನಲ್‌ನಲ್ಲಿ ದಿವಿಜ್‌ ಹಾಗೂ ಯೂಕಿ ಭಾರತದವರೇ ಆದ ಸೋಮದೇವ್‌ ಹಾಗೂ ಸನಮ್‌ ಎದುರು ಸೆಣಸಲಿದ್ದಾರೆ.
 

Share this Story:

Follow Webdunia kannada