ಸ್ವಲ್ಪ ನನ್ನ ಮಾತು ಕೇಳಿ ಅಂತಿದ್ದಾರೆ ಸೈನಾ ನೆಹ್ವಾಲ್

Webdunia
ಮಂಗಳವಾರ, 5 ಸೆಪ್ಟಂಬರ್ 2017 (09:10 IST)
ಹೈದರಾಬಾದ್: ಬ್ಯಾಡ್ಮಿಂಟನ್ ಕೋಚಿಂಗ್ ಗಾಗಿ ಬೆಂಗಳೂರು-ಹೈದರಾಬಾದ್ ನಡುವೆ ಓಡಾಡಿ ಬಹುಶಃ ಸೈನಾ ನೆಹ್ವಾಲ್ ಗೂ ಸುಸ್ತಾಗಿರಬೇಕು. ಅದಕ್ಕೆ ಅವರು ಮತ್ತೆ ಹಳೇ ಗುರುವಿನ ಪಾದ ಹಿಡಿದಿದ್ದಾರೆ. ಇದರ ಬಗ್ಗೆ ಅವರೇ ಫೇಸ್ ಬುಕ್ ನಲ್ಲಿ ಸ್ಪಷ್ಟನೆಯನ್ನೂ ನೀಡಿದ್ದಾರೆ.

 
2014 ರಲ್ಲಿ ಕೋಚ್ ಗೋಪಿಚಂದ್ ಜತೆ ಮುನಿಸುಕೊಂಡು ವಿಮಲ್ ಕುಮಾರ್ ಗೂಡು ಸೇರಿಕೊಂಡಿದ್ದ ಸೈನಾ ಫಾರ್ಮ್ ಮರಳಿ ಪಡೆಯಲು ಹಳೇ ಗುರುವಿನ ಅಕಾಡೆಮಿ ಸೇರಿದ್ದಾರೆ. ಈ ಬಗ್ಗೆ ಬಂದ ಸುದ್ದಿಗಳಿಗೆ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ನಾನು ಮತ್ತೆ ಗೋಪಿಚಂದ್ ಅಕಾಡೆಮಿಗೆ ನನ್ನ ತರಬೇತಿ ಶಿಫ್ಟ್ ಮಾಡುತ್ತಿದ್ದೇನೆ. ಈ ಬಗ್ಗೆ ಗೋಪಿಚಂದ್ ಜತೆ ಚರ್ಚಿಸಿದ್ದು, ಅವರೂ ನನಗೆ ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ನನ್ನ ಗುರಿ ಸಾಧಿಸಲು ಗೋಪಿಚಂದ್ ಮಾತ್ರ ಸಹಾಯ ಮಾಡಬಲ್ಲರು. ಇಷ್ಟು ದಿನ ನನಗೆ ತರಬೇತಿ ನೀಡಿದ ವಿಮಲ್ ಕುಮಾರ್ ಗೆ ಧನ್ಯವಾದಗಳು. ಇದೀಗ ಮತ್ತೆ ತವರಿಗೆ ವಾಪಸಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ. ನನ್ನನ್ನು ಹೀಗೇ ಬೆಂಬಲಿಸುತ್ತಿರಿ’ ಎಂದು ಸೈನಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ.. ನೋ ಬಾಲ್ ಎಸೆದು ಎದುರಾಳಿಗೆ ಶತಕ ತಪ್ಪಿಸಿದ ವಿಂಡೀಸ್ ಕ್ರಿಕೆಟಿಗ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಳೇ ವಿಚಾರ ಹೇಳಿ ಹರ್ಲಿನ್ ಡಿಯೋಲ್ ಗೇ ಅಚ್ಚರಿ ನೀಡಿದ ಪ್ರಧಾನಿ ಮೋದಿ

ವಿಶ್ವಕಪ್ ಟ್ರೋಫಿ ಮುಟ್ಟದೇ ಪೋಸ್ ಕೊಟ್ಟ ಮೋದಿ: ಪ್ರಧಾನಿಗೆ ಕ್ರಿಕೆಟಿಗರು ಕೊಟ್ಟ ಗಿಫ್ಟ್ ಏನು

ವಿಶ್ವ ಚಾಂಪಿಯನ್ ಆದ ಮಹಿಳಾ ಕ್ರಿಕೆಟಿಗರನ್ನು ಭೇಟಿಯಾದ ಮೋದಿ: ಟ್ರೋಫಿ ಜೊತೆಗೆ ಪೋಸ್

Virat Kohli birthday: ಎಂಜಿ ರೋಡ್ ನಲ್ಲಿ ಮೊದಲು ಟ್ಯಾಟೂ ಹಾಕಿಸಿದ್ದ ಕೊಹ್ಲಿ ಆಮೇಲೆ ಮುಚ್ಚಿಟ್ಟಿದ್ದು ಯಾಕೆ

ತಿಲಕ ಬೇಡ ಎಂದ ಸ್ಮೃತಿ ಮಂಧಾನ: ಯಾಕೆ ಹೀಗೆ ನೆಟ್ಟಿಗರ ಪ್ರಶ್ನೆ: video

ಮುಂದಿನ ಸುದ್ದಿ
Show comments