ಹಾಗೊಂದು ಅನುಮಾನಗಳು ಬಿಸಿಸಿಐ ವಲಯದಲ್ಲಿ ಕೇಳಿಬರುತ್ತಿವೆ. ಮೂಲಗಳ ಪ್ರಕಾರ ರಾಮಚಂದ್ರ ಗುಹಾ ಅವರಿಗೆ ಅನಿಲ್ ಕುಂಬ್ಳೆಯನ್ನು ಕೋಚ್ ಸ್ಥಾನದಲ್ಲಿ ಮುಂದುವರಿಸದೇ ಇರುವುದರ ಬಗ್ಗೆ ಅಸಮಾಧಾನವಿದೆ. ಅದನ್ನು ಪ್ರತಿಭಟಿಸಲು ಅವರು ತಮ್ಮ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಕುಂಬ್ಳೆಗೆ 2019 ರ ವಿಶ್ವಕಪ್ ವರೆಗೆ ಸ್ಥಾನ ನೀಡಬಾರದೇಕೆ ಎನ್ನುವುದು ಗುಹಾ ಪ್ರಶ್ನೆಯಾಗಿತ್ತು. ಈ ಬಗ್ಗೆ ಅವರು ಅಧಿಕಾರಿಗಳೊಂದಿಗೆ ವಾದಿಸಿದ್ದರು. ಆದರೆ ತಮ್ಮ ವಾದಕ್ಕೆ ಬೆಲೆ ನೀಡದೇ ಹೊಸ ಕೋಚ್ ಗೆ ಅರ್ಜಿ ಆಹ್ವಾನಿಸಿದ್ದರಿಂದ ಅಸಮಾಧಾನಗೊಂಡು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎನ್ನಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ