Webdunia - Bharat's app for daily news and videos

Install App

PV Sindhu: ನಮಗಾಗಿ ಎಷ್ಟೊಂದು ಮಾಡಿದ್ದೀರಿ, ಇಟ್ಸ್ ಓಕೆ ಚಾಂಪಿಯನ್: ಬೇಸರದ ನಡುವೆಯೂ ಪಿವಿ ಸಿಂಧುಗೆ ಸಾಂತ್ವನ

Krishnaveni K
ಶುಕ್ರವಾರ, 2 ಆಗಸ್ಟ್ 2024 (09:46 IST)
ಪ್ಯಾರಿಸ್: ಈ ಬಾರಿಯೂ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುತ್ತಾರೆ ಎಂದು ಭರವಸೆ ಮೂಡಿಸಿದ್ದ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲುವುದರೊಂದಿಗೆ ಕೋಟ್ಯಾಂತರ ಭಾರತೀಯರ ಕನಸು ಭಗ್ನವಾಗಿದೆ.

ಆದರೆ ಪಿವಿ ಸಿಂಧು ಸೋತಿರುವುದು ಬೇಸರ ತಂದರೂ ಅಭಿಮಾನಿಗಳು ಆಕೆಯನ್ನು ಸಂತೈಸಿದ್ದಾರೆ. ಪಿವಿ ಸಿಂಧು ಈಗಾಗಲೇ ಎರಡು ಒಲಿಂಪಿಕ್ಸ್ ಪದಕ ಗೆದ್ದಿದ್ದಾರೆ. ಆದರೆ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಚೀನಾದ ಬಿಂಗ್ ಜಿಯಾವೊ ವಿರುದ್ಧ 19-21, 14-21 ಅಂತರದಿಂದ ಸೋತರು.

ಇದರೊಂದಿಗೆ ಪಿವಿ ಸಿಂಧು ಪದಕದ ಕನಸು ಕಮರಿದೆ. ಅಭಿಮಾನಿಗಳೂ ಇದರಿಂದ ಬೇಸರಗೊಂಡಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ್ದ ಪಿವಿ ಸಿಂಧು, ಒಬ್ಬರು ಸೋಲಬೇಕು, ಇನ್ನೊಬ್ಬರು ಗೆಲ್ಲಬೇಕು. ಬಹುಶಃ ಈವತ್ತು ಸೋಲು ನನ್ನ ಪಾಲಾಗಿತ್ತು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಆದರೆ ಅವರ ಈ ಮಾತಿನಲ್ಲೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲ ಎಂಬ ಬೇಸರವಿತ್ತು.

ಸಿಂಧು ಮಾತು ಕೇಳಿಸಿಕೊಂಡ ಅಭಿಮಾನಿಗಳು, ಏನೇ ಆದರೂ ನಿಮ್ಮ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮ ದೇಶಕ್ಕಾಗಿ ಈಗಾಗಲೇ ಎರಡು ಒಲಿಂಪಿಕ್ಸ್ ಪದಕ ಗೆದ್ದಿದ್ದೀರಿ. ಪರವಾಗಿಲ್ಲ ಚಾಂಪಿಯನ್, ನೀವು ನಮ್ಮ ಹೆಮ್ಮೆ ಎಂದು ಸಮಾಧಾನಿಸಿದ್ದಾರೆ. ಕಳೆದ ಒಂದು ದಶಕದಿಂದ ದೇಶದ ಕೀರ್ತಿ ಪತಾಕೆ ಹಾರಿಸಿದ್ದೀರಿ. ನಿಮ್ಮ ಸನಿಹವೂ ಬರಲು ಬೇರೆಯವರಿಗೆ ಕಷ್ಟ. ಬೇಸರಗೊಳ್ಳಬೇಡಿ, ಸಿಂಧು ನಿಮ್ಮ ಜೊತೆ ನಾವಿದ್ದೇವೆ ಎಂದು ಬೆನ್ನುತಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments