ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ಮೇಲೂ ಪ್ರಶಸ್ತಿಗಾಗಿ ಭಿಕ್ಷೆ ಬೇಡಬೇಕು: ಮನುಭಾಕರ್ ತಂದೆ ಬೇಸರ

Krishnaveni K
ಸೋಮವಾರ, 23 ಡಿಸೆಂಬರ್ 2024 (14:46 IST)
ನವದೆಹಲಿ: ಈ ಬಾರಿ ಒಲಿಂಪಿಕ್ಸ್ ನಲ್ಲಿ ಎರಡೆರಡು ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದ ಶೂಟರ್ ಮನು ಭಾಕರ್ ಹೆಸರು ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳದೇ ಇರುವುದಕ್ಕೆ ಅವರ ತಂದೆ ಬೇಸರ ಹೊರಹಾಕಿದ್ದಾರೆ.

ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಹೆಸರು ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಆದರೆ ಮನುಭಾಕರ್ ಅರ್ಜಿ ಸಲ್ಲಿಸದೇ ಇರುವುದರಿಂದ ಅವರ ಹೆಸರು ನಾಮನಿರ್ದೇಶನಗೊಂಡಿಲ್ಲ ಎಂದು ಕ್ರೀಡಾ ಇಲಾಖೆ ಹೇಳಿತ್ತು.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್ ನಾನು ಅರ್ಜಿ ಸಲ್ಲಿಸಿದ್ದೇನೆ. ಆದರೆ ಕ್ರೀಡಾ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಂದೇ ಒಲಿಂಪಿಕ್ಸ್ ನಲ್ಲಿ ಎರಡೆರಡು ಪದಕ ಗೆದ್ದ ಮೇಲೂ ಪ್ರಶಸ್ತಿಗಾಗಿ ಭಿಕ್ಷೆ ಬೇಡಬೇಕೇ?’ ಎಂದು ಪ್ರಶ್ನಿಸಿದ್ದಾರೆ.

ಈ ಬಾರಿ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕೇವಲ 6 ಪದಕ ಬಂದಿತ್ತು. ಈ ಪೈಕಿ ಎರಡು ಪದಕವನ್ನೂ ಮನುಭಾಕರ್ ಗೆದ್ದುಕೊಟ್ಟಿದ್ದರು. ಒಂದು ವೈಯಕ್ತಿಕ ವಿಭಾಗದಲ್ಲಿ ಇನ್ನೊಂದು ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಮಾಡಿದ್ದರು. ಆದರೆ ಇಂತಹ ಸಾಧನೆ ಮಾಡಿದ ತಾರೆಗೆ ಪ್ರಶಸ್ತಿ ಇಲ್ಲದೇ ಹೋಗಿದ್ದು ವಿಪರ್ಯಾಸ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಆಸ್ಟ್ರೇಲಿಯಾ ನಡುವೆ ನಾಳೆ ಕೊನೆಯ ಏಕದಿನ: ರೋಹಿತ್, ಕೊಹ್ಲಿ ಫ್ಯಾನ್ಸ್ ಗೆ ಕಾಡ್ತಿದೆ ಭಯ

ಅನುಷ್ಕಾ ಶರ್ಮಾ ಲಂಡನ್‌ ಮೋಹದಿಂದ ವಿರಾಟ್‌ ಕೊಹ್ಲಿಯ ಕ್ರಿಕೆಟ್‌ ಹಾಳಾಯಿತಾ: ನೆಟ್ಟಿಗರ ತರಾಟೆ

ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಲ್ಲಿ ವಿಶೇಷ ಹುದ್ದೆ

ಟೀಂ ಇಂಡಿಯಾ ಉದ್ದಾರವಾಗಬೇಕೆಂದರೆ ಈ ಇಬ್ಬರನ್ನು ಮೊದಲು ಕಿತ್ತು ಹಾಕ್ಬೇಕು

ಎರಡು ಬಾರಿ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ ಮಾಡಿದ್ದೇನು

ಮುಂದಿನ ಸುದ್ದಿ
Show comments