Webdunia - Bharat's app for daily news and videos

Install App

ಡಾನ್ ಬ್ರಾಡ್ಮನ್‌ರ 66 ವರ್ಷ ಹಳೆಯದಾದ ವಿಶ್ವದಾಖಲೆ ಮುರಿದ ಸಂಗಕ್ಕಾರ

Webdunia
ಸೋಮವಾರ, 11 ಆಗಸ್ಟ್ 2014 (17:02 IST)
ಶ್ರೀಲಂಕಾದ ಹಿರಿಯ ಆಟಗಾರ, ರನ್ ಮಶಿನ್ ಕುಮಾರ್ ಸಂಗಕ್ಕಾರ 10 ನೇ ಬಾರಿಗೆ ದ್ವಿಶತಕ ಬಾರಿಸುವುದರ ಮೂಲಕ ವೆಸ್ಟ್ ಇಂಡಿಸ್ ಆಟಗಾರ ಬ್ರಿಯಾನ್ ಲಾರಾ ಅವರ 9 ದ್ವಿಶತಕಗಳ ದಾಖಲೆಯನ್ನು ಮುರಿದರಲ್ಲದೇ ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ  ಆಟಗಾರ ಎಂದು ಗುರುತಿಸಲ್ಪಡುವ ಡಾನ್ ಬ್ರಾಡ್ಮನ್‌ ಅವರನ್ನು ಕೂಡ ಹಿಂದಿಕ್ಕಿದ್ದಾರೆ. 

ಗಾಲೆಯ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ  ಪಾಕಿಸ್ತಾನದ ವಿರುದ್ಧ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಸಂಗಕ್ಕಾರ 425 ಎಸೆತಗಳಲ್ಲಿ 24 ಬೌಂಡರಿ ಸೇರಿದಂತೆ 221 ರನ್ ಗಳಿಸಿ ಟೆಸ್ಟ್ ವೃತ್ತಿ ಬದುಕಿನ 10ನೇ ದ್ವಿಶತಕ ದಾಖಲಿಸಿದರು. ಈ ಮೂಲಕ ಟೆಸ್ಟ್‌ನಲ್ಲಿ ಒಟ್ಟು 13 ಬಾರಿ 190 ರನ್ ಗಡಿ ದಾಟಿರುವ ಸಂಗಕ್ಕಾರ, ಈ ಮೊದಲು 12 ಬಾರಿ ಈ ಸಾಧನೆ ಮಾಡಿದ್ದ ಬ್ಯಾಟಿಂಗ್ ದಂತಕತೆ ಸರ್ ಡೊನಾಲ್ಡ್ ಬ್ರಾಡ್‌ಮನ್‌ರ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದರು. 
 
ಬ್ರಾಡ್ಮನ್ ಟೆಸ್ಟ್‌ನಲ್ಲಿ 12 ದ್ವಿಶತಕ ಗಳಿಸಿದ್ದು, ಅಷ್ಟೇ ಬಾರಿ 190 ರನ್ ಗಡಿದಾಟಿದ್ದಾರೆ. ಆದರೆ ಸಂಗಕ್ಕಾರ 13 ಬಾರಿ 190 ರ ಗಡಿ ದಾಟಿದ್ದು, ಅದರಲ್ಲಿ ಹತ್ತನ್ನು ದ್ವಿಶತಕವನ್ನಾಗಿ ಪರಿವರ್ತಿಸಲು ಯಶಸ್ವಿಯಾಗಿದ್ದಾರೆ. ಸಂಗಕ್ಕಾರ 2 ಬಾರಿ 192ಕ್ಕೆ ಔಟಾದರೆ, ಒಮ್ಮೆ  199 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.
 
ಶನಿವಾರ ಶತಕವನ್ನು ಪೂರೈಸಿದ್ದ ಸಂಗಕ್ಕಾರ ಭಾನುವಾರ ತಮ್ಮ ದ್ವಿಶತಕವನ್ನು ದಾಖಲಿಸಿದರು. ಅವರ ಈ ದ್ವಿಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಅಂತಿಮ 7 ವಿಕೆಟ್‌ಗಳ ರೋಜಕ ಜಯದೊಂದಿಗೆ ತನ್ನದಾಗಿಸಿಕೊಂಡಿತು.
 
36 ವಯಸ್ಸಿನ ಸಂಗಕ್ಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ  11,886 (59.13 ಬ್ಯಾಟಿಂಗ್ ಸರಾಸರಿ)  ರನ್ ಗಳಿಸಿದ್ದು, ಅತಿ ಹೆಚ್ಚು ರನ್ ಗಳಿಸಿದವರ ಪೈಕಿ 6ನೇ ಸ್ಥಾನದಲ್ಲಿದ್ದಾರೆ. 
 
ಟೆಸ್ಟ್ ಪಂದ್ಯಗಳಲ್ಲಿ  10 ದ್ವಿಶತಕ ದಾಖಲಿಸಿರುವ ಅಗ್ರರ ಪಟ್ಟಿ ಈ ರೀತಿ ಇದೆ 
ಡಾನ್ ಬ್ರಾಡ್ಮನ್          (ಆಸ್ಟ್ರೇಲಿಯ) 12 
ಕುಮಾರ ಸಂಗಕ್ಕರ       (ಶ್ರೀಲಂಕಾ) 10 
ಬ್ರಿಯಾನ್ ಲಾರಾ        (ವೆಸ್ಟ್ ಇಂಡೀಸ್) 9 
ವ್ಯಾಲಿ ಹ್ಯಾಮಂಡ್       (ಇಂಗ್ಲೆಂಡ್) 7 
ಮಹೇಲ ಜಯವರ್ಧನೆ    (ಶ್ರೀಲಂಕಾ) 7 
ಮಾರ್ವನ್ ಅಟಪಟ್ಟು     (ಶ್ರೀಲಂಕಾ) 6 
ವೀರೇಂದ್ರ ಸೆಹ್ವಾಗ್       (ಭಾರತ) 6 
ಮಿಯಾಂದಾದ್          (ಪಾಕಿಸ್ತಾನ) 6 
ರಿಕಿ ಪಾಂಟಿಂಗ್         (ಆಸ್ಟ್ರೇಲಿಯಾ) 6 
ಸಚಿನ್ ತೆಂಡೂಲ್ಕರ್     (ಭಾರತ) 6

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments