Select Your Language

Notifications

webdunia
webdunia
webdunia
webdunia

ಮುಂಬೈಯನ್ನು ಮಣಿಸಿ ಫೈನಲ್‌‌ಗೆ ಪಾದಾರ್ಪಣೆ ಮಾಡಿದ ಕರ್ನಾಟಕ

ಮುಂಬೈಯನ್ನು ಮಣಿಸಿ ಫೈನಲ್‌‌ಗೆ ಪಾದಾರ್ಪಣೆ ಮಾಡಿದ ಕರ್ನಾಟಕ
ಬೆಂಗಳೂರು , ಶನಿವಾರ, 28 ಫೆಬ್ರವರಿ 2015 (12:03 IST)
ಕರ್ನಾಟಕ v/s ಮುಂಬೈ ರಣಜಿ ಪ್ರೋಫಿ 2014-15 ರ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ  ಕರ್ನಾಟಕ ತಂಡವು ತನ್ನ ಎದುರಾಳಿ ಮುಂಬೈ ವಿರುದ್ಧ 112ರನ್‌ಗಳ ಅಂತರದಿಂದ ರೋಚಕ ಜಯ ದಾಖಲಿಸಿದ್ದು, ಫೈನಲ್‌ಗೆ ಲಗ್ಗೆ ಇಟ್ಟಿದೆ.  ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 202 ರನ್‌ಗಳಿಗೆ ಆಲೌಟಾಗಿತ್ತು. ಆದರೆ ವಿನಯ್ ಕುಮಾರ್ ಅವರ ಮಾರಕ ಬೌಲಿಂಗ್‌ದಾಳಿಗೆ ಧೂಳೀಪಟವಾದ ಮುಂಬೈ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ  ಕೇವಲ 44 ಓವರುಗಳಿಗೆ ಆಲೌಟಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಎರಡನೇ ಇನ್ನಿಂಗ್ಸ್‌ನಲ್ಲಿ 286 ರನ್ ಹೊಡೆದಿದ್ದು, ಮುಂಬೈ ಗೆಲುವಿಗೆ 445 ರನ್ ಅಗತ್ಯವಿತ್ತು. 
 
ರಡನೇ ದಿನದಾಟದ ಮೊತ್ತ ವಿಕೆಟ್ ನಷ್ಟವಿಲ್ಲದೆ 61ರಿಂದ ಮೂರನೇ ದಿನದಾಟ ಆರಂಭಿಸಿದ್ದ ಮುಂಬೈ, ಬಹುತೇಕ ದಿನದಾಟದ ಆರಂಭಿಕ ಎರಡು ಅವಧಿಗಳ ಕಾಲ ಕರ್ನಾಟಕ ಬೌಲರ್‌ಗಳ ದಾಳಿಯನ್ನು ರಕ್ಷಣಾತ್ಮಕವಾಗಿ ಎದುರಿಸುವ ಮೂಲಕ ಪ್ರತಿರೋಧ ನೀಡುವ ಪ್ರಯತ್ನ ನಡೆಸಿದರು. ಆದರೆ ಮಹತ್ವದ ಹಂತದಲ್ಲಿ ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡ ಮುಂಬೈ ಸಂಕಷ್ಟಕ್ಕೆ ಸಿಲುಕಿತು. ಅಂತಿಮ ಹಂತದಲ್ಲಿ ಲಾಡ್ ಹಾಗೂ ನಾಯರ್ ತಂಡಕ್ಕೆ ಆಸರೆಯಾದರು.
 
ಕರ್ನಾಟಕ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡದ ನಾಯಕ ಆದಿತ್ಯ ತಾರೆ, ಕೆಚ್ಚೆದೆಯ ಹೋರಾಟ ನಡೆಸಿದ್ದರು. ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಇನಿಂಗ್ಸ್ ಕಟ್ಟಿದ್ದ ತಾರೆ, 15 ಬೌಂಡರಿ ಸೇರಿದಂತೆ 207 ಎಸೆತಗಳಿಗೆ 98ರನ್‌ ಗಳಿಸಿದ್ದರು. ಆದರೆ, ಶತಕದ ಹೊಸ್ತಿಲಲ್ಲಿ ಎಡವಿದ ಅವರು ತಮ್ಮ ಹೋರಾಟದ ಇನಿಂಗ್ಸ್‌ಗೆ ತೆರೆ ಎಳೆದುಕೊಂಡರು. 
 
ಎರಡನೇ ದಿನದಾಟದಲ್ಲಿ ಅಜೇಯವಾಗುಳಿದಿದ್ದ ತಾರೆ ಹಾಗೂ ಅಖಿಲ್ ಹೆರ್ವಾಡ್ಕರ್ ಮೂರನೇ ದಿನವೂ ತಂಡವನ್ನು ಉತ್ತಮ ಹಾದಿಯಲ್ಲಿ ನಡೆಸುವ ತವಕದಲ್ಲಿದ್ದರು. ಆದರೆ, 31 ರನ್ ದಾಖಲಿಸಿದ್ದ ಅಖಿಲ್, ವೇಗಿ ಅಭಿಮನ್ಯು ಮಿಥುನ್ ವೇಗದ ಬೌಲಿಂಗ್‌ಗೆ ಶರಣಾಗಬೇಕಾಯಿತು. 
 
ಇನ್ನು ಕರ್ನಾಟಕದ ಆಟಗಾರ ಮಿಥುನ್, ತಂಡದ ಪರ ಮಾರಕ ದಾಳಿ ನಡೆಸಿ ಮುಂಬೈ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸವಾಲಾಗಿ ನಿಂತರು. ಅದ್ಭುತ ಬೌನ್ಸ್ ಎಸೆತಗಳನ್ನು ಪ್ರಯೋಗಿಸಿದ ಮಿಥುನ್, ಮುಂಬೈನ ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ಮಿಥುನ್ 3 ವಿಕೆಟ್ ಕಬಳಿಸಿದರೆ, ವಿನಯ್, ಶ್ರೇಯಸ್ ಹಾಗೂ ಅರವಿಂದ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಈ ಮೂಲಕ ಕರ್ನಾಟಕ ಫೈನಲ್ ಪ್ರವೇಶಿಸಿದೆ. 

Share this Story:

Follow Webdunia kannada