Select Your Language

Notifications

webdunia
webdunia
webdunia
webdunia

ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಗೆದ್ದ ವೇಟ್‌ಲಿಫ್ಟರ್‌ಗೆ 50 ಲಕ್ಷ ರೂ ಬಹುಮಾನ: ಜಯಲಲಿತಾ

ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕ ಗೆದ್ದ ವೇಟ್‌ಲಿಫ್ಟರ್‌ಗೆ 50 ಲಕ್ಷ ರೂ ಬಹುಮಾನ: ಜಯಲಲಿತಾ
ಚೆನ್ನೈ , ಮಂಗಳವಾರ, 29 ಜುಲೈ 2014 (15:38 IST)
ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಾವಳಿಯ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ವೆಲ್ಲೂರ್ ಮೂಲದ ಸತೀಶ್ ಕುಮಾರ್ ಶಿವಲಿಂಗಂ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ 50 ಲಕ್ಷ ರೂಪಾಯಿಗಳ ನಗದು ಬಹುಮಾನ ಘೋಷಿಸಿದ್ದಾರೆ. 
 
ವೇಟ್‌ಲಿಫ್ಟರ್ ಸತೀಶ್ ಒಟ್ಟು 328 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾದರು. 2010ರ ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ ರವಿ ಕಟುಲು ಈ ಬಾರಿ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.   
 
ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಮತ್ತು ತಮಿಳುನಾಡಿನ ಗೌರವ ಹೆಚ್ಚಿಸಿರುವುದರಿಂದ ತಮಿಳುನಾಡು ಜನತೆಯ ಪರವಾಗಿ ನನ್ನ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಜಯಲಲಿತಾ ಸಂತಸ ವ್ಯಕ್ತಪಡಿಸಿದ್ದಾರೆ.   
 
ಕಾಮನ್‌ವೆಲ್ತ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ 50 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಜೆ.ಜಯಲಲಿತಾ ಘೋಷಿಸಿದ್ದಾರೆ.

Share this Story:

Follow Webdunia kannada