Select Your Language

Notifications

webdunia
webdunia
webdunia
webdunia

ನನ್ನ ಜೀವನ ಆಧಾರಿತ ಸಿನೆಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಬೇಕು: ಸಾನಿಯಾ

ನನ್ನ ಜೀವನ ಆಧಾರಿತ ಸಿನೆಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಬೇಕು:  ಸಾನಿಯಾ
ಹೈದ್ರಾಬಾದ್ , ಭಾನುವಾರ, 16 ನವೆಂಬರ್ 2014 (11:44 IST)
ನವ ದೆಹಲಿ: ಬಾಲಿವುಡ್ಡಿನಲ್ಲಿ ಕ್ರೀಡಾ ಸಾಧಕರ ಜೀವನ ಆಧಾರಿತ ಸಿನೆಮಾಗಳು ಒಂದರ ಮೇಲೊಂದು ಗೆಲ್ಲುತ್ತಿದ್ದರೂ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ತಮ್ಮ ಜೀವನ ತೆರೆಯ ಮೇಲೆ ಕಾಣಿಸುವುದು ಇಷ್ಟವಿಲ್ಲವಂತೆ. ನನ್ನ ನಿಜ ಜೀವನದಲ್ಲಿ ನಾನು ಖಾಸಗಿ ವ್ಯಕ್ತಿ ಎಂದಿದ್ದಾರೆ.
 
ನನ್ನ ಜೀವನ ಆಧಾರಿತ ಯಾವುದೇ ಸಿನೆಮಾಗೂ ನಾನು ವಿವರಗಳನ್ನು ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ, ಒಂದು ಪಕ್ಷ ಮುಂದೊಂದು ದಿನ ಈ ತರಹದ ಸಿನೆಮಾ ಸಿದ್ಧವಾದರೆ ದೀಪಿಕಾ ಪಡುಕೋಣೆ ನನ್ನ ಪಾತ್ರವನ್ನು ಪೋಷಿಸಬೇಕೆಂದು ನನಗೆ ಇಷ್ಟ ಎಂದಿದ್ದಾರೆ.
 
ಶನಿವಾರಕ್ಕೆ ೨೮ ತುಂಬಿದ ಸಾನಿಯಾ, "ಎಗೇನಿಸ್ಟ್ ಆಲ್ ಆಡ್ಸ್" (ಎಲ್ಲ ತೊಂದರೆಗಳನ್ನೂ ಮೀಟಿ) ಎಂಬ ತಾತ್ಕಾಲಿಕ ಹೆಸರಿನ ಆತ್ಮಕಥೆ ಬರೆದಿದ್ದ, ಈಗ ಅದು ಸಂಕಲನ ಹಂತದಲ್ಲಿದೆ.
 
ಬಾಲಿವುಡ್ ನಟಿಯರಾದ ದಿಯಾ ಮಿರ್ಜಾ ಮತ್ತು ದಿವ್ಯಾ ದತ್ತ ಅವರೊಂದಿಗೆ ಈ ಭಾರತೀಯ ಟೆನಿಸ್ ತಾರೆ ಭಾರತೀಯ ಮಕ್ಕಳ ಸಿನೆಮಾ ಸಮಾಜ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ  ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು.

Share this Story:

Follow Webdunia kannada