Webdunia - Bharat's app for daily news and videos

Install App

ಚೀನಾ ಓಪನ್: ಪ್ರಶಸ್ತಿ ಮುಡಿಗೇರಿಸಿಕೊಂಡ ಸೈನಾ ನೆಹ್ವಾಲ್‌

Webdunia
ಭಾನುವಾರ, 16 ನವೆಂಬರ್ 2014 (15:21 IST)
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಚೀನಾ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
 
ಚೀನಾ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದುಕೊಂಡಿರುವ ಹೆಗ್ಗಳಿಕೆ ಸೈನಾ ನೆಹ್ವಾಲ್ ಪಾತ್ರರಾಗಿದ್ದಾರೆ.
 
ಜಪಾನ್‌ನ ಆಕಾನೆ ಯಮಗುಚಿ ವಿರುದ್ಧ ಸೈನಾ ಗೆಲುವು ಸಾಧಿಸಿದ್ದಾರೆ. 21-12, 22-20 ನೇರ ಅಂಕಗಳಿಂದ ಸೈನಾ ವಿಜಯದ ಪಥಾಕೆ ಹಾರಿಸಿದ್ದಾರೆ. ಒಟ್ಟಿನಲ್ಲಿ ಸೈನಾ ಗೆದ್ದಿರುವ ಪ್ರಶಸ್ತಿಗಳ ಪೈಕಿ 2014ರಲ್ಲಿ 3ನೇ ಪ್ರಶಸ್ತಿ ಇದಾಗಿದೆ.
 
ಹೇಕ್ಷಿಯಾ ಒಲಿಂಪಿಕ್ಸ್ ಸ್ಪೋರ್ಟ್ ಸೆಂಟರ್‌ನಲ್ಲಿ ಶನಿವಾರ ನೆಡೆದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್, 21-17, 21-17 ನೇರ ಅಂಕಗಳಿಂದ ಚೀನಾದ ಲಿಯು ಕ್ಷಿನ್ ವಿರುದ್ಧ ಜಯಗಳಿಸಿದ್ದರು.  
 
ಒಟ್ಟು 47 ನಿಮಿಷಗಳ  ಕಾಲ ನಡೆದ ಪಂದ್ಯದಲ್ಲಿ ವಿಶ್ವದ 5ನೇ ಶ್ರೇಯಾಂಕಿತೆ ಸೈನಾ, ಉತ್ತಮ ಆಟ ಪ್ರದರ್ಶಿಸುವ ಮೂಲಕ ವಿಶ್ವದ 17ನೇ ಶ್ರೇಯಾಂಕಿತೆ ಲಿಯು ಕ್ಷಿನ್‌ಗೆ ನಿರೀಕ್ಷಿತ ಸೋಲುಣಿಸಿದರು.
 
ಪ್ರಾರಂಭದಲ್ಲಿ ಸೈನಾ ನೆಹ್ವಾಲ್ ಹಿನ್ನಡೆ ಅನುಭವಿಸಿದ್ದರು. ಮೊದಲ ಗೇಮ್‌ನ ಒಂದು ಹಂತದಲ್ಲಿ ಲಿಯು ಕ್ಷಿನ್, 7-4ರ ಮುನ್ನಡೆಯೊಂದಿಗೆ ಮೇಲುಗೈ ಸಾಧಿಸಿದ್ದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments