Webdunia - Bharat's app for daily news and videos

Install App

ಅಂತರರಾಷ್ಟ್ರೀಯ ಜಾವೆಲಿನ್‌ ಥ್ರೋ ಸ್ಪರ್ಧೆಗೆ ಬೆಂಗಳೂರು ಸಜ್ಜು: ನೀರಜ್ ಚೋಪ್ರಾರನ್ನು ಗೌರವಿಸಿದ ಸಿದ್ದರಾಮಯ್ಯ

Sampriya
ಗುರುವಾರ, 3 ಜುಲೈ 2025 (14:34 IST)
Photo Credit X
ಬೆಂಗಳೂರು: ಭಾರತದ ಜಾವೆಲಿನ್‌ ಥ್ರೋ ತಾರೆ ನೀರಜ್‌ ಚೋಪ್ರಾ ಅವರ ಮುತುವರ್ಜಿಯಲ್ಲಿ ಇದೇ ಶನಿವಾರ ನಡೆಯಲಿರುವ ನೀರಜ್‌ ಚೋಪ್ರಾ ಕ್ಲಾಸಿಕ್‌ ಜಾವೆಲಿನ್ ಸ್ಪರ್ಧೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಸಜ್ಜಾಗಿದೆ. 

ಸತತ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ, ವಿಶ್ವ ಚಾಂಪಿಯನ್‌ ಜಾವೆಲಿನ್‌ ಪಟು ನೀರಜ್‌ ಚೋಪ್ರಾ ಅವರು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಗುರುವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿ, ಜಾವೆಲಿನ್ ಸ್ಪರ್ಧೆಯ ಕುರಿತು ಮಾಹಿತಿ ನೀಡಿದರು. 
ಇದೇ ವೇಳೆ ನೀರಜ್ ಚೋಪ್ರಾ ಅವರಿಗೆ ಹಾರ ಹಾಕಿ, ಶಾಲು ಹೊದಿಸಿ ಮುಖ್ಯಮಂತ್ರಿಗಳು ಸನ್ಮಾನಿಸಿದರು.  

ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರೂ ಆದ ವಿಧಾನ‌ ಪರಿಷತ್ ಸದಸ್ಯ ಗೋವಿಂದರಾಜು ಅವರು ಉಪಸ್ಥಿತರಿದ್ದರು. ಅಂದಹಾಗೆ ಜುಲೈ 5ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್  ಜಾವೆಲಿನ್ ಸ್ಪರ್ಧೆಯಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ.

ಜುಲೈ 5ರಂದು ನಡೆಯಲಿರುವ ಜಾಗತಿಕ ಮಟ್ಟದ ನೀರಜ್‌ ಚೋಪ್ರಾ ಕ್ಲಾಸಿಕ್‌ ಸ್ಪರ್ಧೆಗೆ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಿದೆ. ನೀರಜ್‌ ಜೊತೆಗೆ ಅಂತಾರಾಷ್ಟ್ರೀಯ ಜಾವೆಲಿನ್‌ ತಾರೆಗಳಾದ ಜೂಲಿಯಸ್‌ ಯೆಗೊ ಮತ್ತು ಥಾಮಸ್‌ ರೋಹ್ಲರ್‌ ಸ್ಪರ್ಧೆಯಲ್ಲಿರುವ ಪ್ರಧಾನ ಆಕರ್ಷಣೆಯಾಗಿದ್ದಾರೆ. ಆದರೆ ಗಾಯದ ಸಮಸ್ಯೆಯಿಂದಾಗಿ ಆ್ಯಂಡರ್ಸನ್‌ ಪೀಟರ್‌ ಹಿಂದೆ ಸರಿದಿದ್ದಾರೆ.

ನೀರಜ್‌ ಚೋಪ್ರಾ ಕ್ಲಾಸಿಕ್‌ ಸ್ಪರ್ಧೆ ವೀಕ್ಷಣೆಗೆ ₹ 200ರಿಂದ 6,000ರ ವರೆಗೂ ಟಿಕೆಟ್‌ ದರವನ್ನು ನಿಗದಿಪಡಿಸಲಾಗಿದೆ. ಸುಮಾರು 30 ಸಾವಿರಕ್ಕೂ ಅಧಿಕ ಆಸನಗಳ ಸಾಮರ್ಥ್ಯವಿದ್ದು, ಸದ್ಯ 6 ಸಾವಿರ ಟಿಕೆಟ್‌ಗಳು ಮಾರಾಟವಾಗಿ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಇದೇ ಮೊದಲ ಬಾರಿ ಈ ಸ್ಪರ್ಧೆ ಆಯೋಜಿಸಲಾಗಿದೆ. <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಂತರರಾಷ್ಟ್ರೀಯ ಜಾವೆಲಿನ್‌ ಥ್ರೋ ಸ್ಪರ್ಧೆಗೆ ಬೆಂಗಳೂರು ಸಜ್ಜು: ನೀರಜ್ ಚೋಪ್ರಾರನ್ನು ಗೌರವಿಸಿದ ಸಿದ್ದರಾಮಯ್ಯ

ಮೊಹಮ್ಮದ್ ಶಮಿ ನಾಲ್ಕು ಲಕ್ಷ ಕೊಟ್ರೆ ಸಾಲಲ್ಲ, 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ ಮಾಜಿ ಪತ್ನಿ

IND vs ENG: ಔಟಾದ ಸಿಟ್ಟಿಗೆ ಡ್ರೆಸ್ಸಿಂಗ್ ರೂಂನಲ್ಲಿ ಹೆಲ್ಮೆಟ್ ಎತ್ತಿ ಬಿಸಾಕಿದ ರಿಷಭ್ ಪಂತ್

IND vs ENG: 21 ಟೆಸ್ಟ್, 16 ಬಾರಿ 50 ಪ್ಲಸ್ ರನ್, ಟೆಸ್ಟ್ ನಲ್ಲಿ ವೀರ ಯಶಸ್ವಿ ಜೈಸ್ವಾಲ್

IND vs ENG: ಟಾಸ್ ಗೆದ್ದಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆ

ಮುಂದಿನ ಸುದ್ದಿ
Show comments