Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಓಪನ್: ಸಾನಿಯಾ-ಸೊರೆಸ್ ಜೋಡಿ ಉಪಾಂತ್ಯಕ್ಕೆ

ಆಸ್ಟ್ರೇಲಿಯಾ ಓಪನ್:  ಸಾನಿಯಾ-ಸೊರೆಸ್ ಜೋಡಿ ಉಪಾಂತ್ಯಕ್ಕೆ
ಮೆಲ್ಬರ್ನ್ , ಗುರುವಾರ, 29 ಜನವರಿ 2015 (16:04 IST)
ಅಗ್ರ ಶ್ರೇಯಾಂಕದ ಸಾನಿಯಾ ಮಿರ್ಜಾ ಮತ್ತು ಬ್ರುನೊ ಸೊರೆಸ್‌ ಅವರು ಸ್ಥಳೀಯ ಜೋಡಿಯೆದುರು 6-2, 6-2 ಸೆಟ್‌ಗಳಿಂದ ಸುಲಭ ಜಯ ಸಾಧಿಸಿ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಸೆಮಿಫೈನಲಿಗೇರಿದ್ದಾರೆ.
 
ಎದುರಾಳಿಯ ಗೇಮ್‌ ಅನ್ನು ಎರಡು ಬಾರಿ ಮುರಿಯುವ ಮೂಲಕ ಉತ್ತಮ ರೀತಿಯಲ್ಲಿ ಆಟ ಆರಂಭಿಸಿದ ಸಾನಿಯಾ-ಸೊರೆಸ್‌ ಅವರು ಕೇವಲ 23 ಸೆಟ್‌ಗಳಲ್ಲಿ ಮೊದಲ ಸೆಟ್‌ ಅನ್ನು 6-2 ಅಂತರದಿಂದ  ಜಯಿಸಿದರು. ದ್ವಿತೀಯ ಸೆಟ್‌ನಲ್ಲೂ ಭರ್ಜರಿ ಆಟ ಮುಂದುವರಿಸಿದ ಅವರು 4-2 ಮುನ್ನಡೆ ಸಾಧಿಸಿದರಲ್ಲದೇ ಮತ್ತೆರಡು ಅಂಕ ಪಡೆದು 6-2 ಅಂತರದಿಂದ ಸೆಟ್‌ ಹಾಗೂ ಪಂದ್ಯ ಗೆದ್ದು ಸಂಭ್ರಮಿಸಿದರು.
 
ಸಾನಿಯಾ-ಸೊರೆಸ್‌ ಅವರು 18 ವಿಜಯಿ ಹೊಡೆತಗಳನ್ನು ನೀಡಿದರೆ 10 ಅನಗತ್ಯ ತಪ್ಪು ಮಾಡಿದರು.
 
ಪೇಸ್‌ ಜೋಡಿ ಸೆಮಿಗೆ
 
ಇದೇ ವೇಳೆ ಭಾರತದ ಲಿಯಾಂಡರ್‌ ಪೇಸ್‌ ಮತ್ತು ಮಾರ್ಟಿನಾ ಹಿಂಗಿಸ್‌ ಅವರು ಸುಲಭ ಜಯದೊಂದಿಗೆ ಸೆಮಿಫೈನಲಿಗೇರಿದ್ದಾರೆ. ಪೇಸ್‌-ಹಿಂಗಿಸ್‌ ಅವರು ನಾಲ್ಕನೇ ಶ್ರೇಯಾಂಕದ ಆಂದ್ರೆ ಹಾವಾಕೋವಾ ಮತ್ತು ಅಲೆಕ್ಸಾಂಡರ್‌ ಪೆಯಾ ಅವರನ್ನು 6-3, 6-1 ನೇರ ಸೆಟ್‌ಗಳಿಂದ ಸೋಲಿಸಿದರು.
 

Share this Story:

Follow Webdunia kannada