Select Your Language

Notifications

webdunia
webdunia
webdunia
webdunia

ಬೆಂಗಳೂರು ಟೆಸ್ಟ್: ಆಸ್ಟ್ರೇಲಿಯಾಗೆ 48 ರನ್ ಲೀಡ್

ಬೆಂಗಳೂರು ಟೆಸ್ಟ್: ಆಸ್ಟ್ರೇಲಿಯಾಗೆ 48 ರನ್ ಲೀಡ್
Bengalu , ಭಾನುವಾರ, 5 ಮಾರ್ಚ್ 2017 (17:05 IST)
ಬೆಂಗಳೂರಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಂತ್ಯಕ್ಕೆ  ಮೊದಲ ಇನ್ನಿಂಗ್ಸ್`ನಲ್ಲಿ ಆಸ್ಟ್ರೇಲಿಯಾ 48 ರನ್`ಗಳ ಮುನ್ನಡೆ ಸಾಧಿಸಿದೆ. 6 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿರುವ ಆಸ್ಟ್ರೇಲಿಯಾ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.


ನಿನ್ನೆ ಭಾರತ 189 ರನ್`ಗಳಿಗೆ ಆಲೌಟ್ ಆಗಿತ್ತು. ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ನಿನ್ನೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿತ್ತು. ಇವತ್ತು ಬ್ಯಾಟಿಂಗ್ ಮುಂದುವರಿಸಿದ ಆಸೀಸ್ ಬ್ಯಾಟ್ಸ್`ಮನ್ಗಳು ರಕ್ಷಣಾತ್ಮಕ ಬ್ಯಾಟಿಂಗ್ ನಡೆಸಿದರು. ಓಪನರ್ ರೇನ್ ಶಾ ಗಳಿಸಿದ 60 ರನ್ ಮತ್ತು ಶಾನ್ ಮಾರ್ಷ್ ಗಳಿಸಿದ 66 ರನ್ ಆಸೀಸ್ ಲೀಡ್ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇವತ್ತೂ ಸಹ ಭಾರತೀಯ ಬೌಲರ್`ಗಳು ವಿಕೆಟ್ ಪಡೆಯಲು ಪರದಾಡಿದರು.
ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರೆ ಜಡೇಜಾ 3 ವಿಕೆಟ್ ಉರುಳಿಸಿದರು. ನಾಳೆ ಪಂದ್ಯದ 3ನೇ ದಿನವಾಗಿದ್ದು, ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಮಿಚೆಲ್ ಸ್ಟಾರ್ಕ್ ಮತ್ತು ಮ್ಯಾಥ್ಯೂ ವೇಡ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಳೆಯ ಮೊದಲ ಸೆಶನ್ನಿನಲ್ಲೇ ಭಾರತ, ಆಸೀಸ್ ಬ್ಯಾಟ್ಸ್`ಮನ್`ಗಳ ಹೆಡೆಮುರಿ ಕಟ್ಟಬೇಕಿದೆ. 100 ರನ್ ಲೀಡ್ ದಾಟಿದರೂ ಭಾರತ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ.

ಸಂಕ್ಷಿಪ್ತ ಸ್ಕೋರ್:
ಭಾರತ: 189 ಆಲೌಟ್
ಆಸ್ಟ್ರೇಲಿಯಾ 2ನೇ ದಿನದಾಟದಂತ್ಯಕ್ಕೆ 237/6
ರೇನ್ ಶಾ - 60
ಶಾನ್ ಮಾರ್ಷ್ – 66
ರವೀಂದ್ರ ಜಡೇಜಾ : 49/3

Share this Story:

Follow Webdunia kannada

ಮುಂದಿನ ಸುದ್ದಿ

ಆಸೀಸ್ ನಾಯಕನನ್ನ ಅಣಕಿಸಿದ ಇಶಾಂತ್ ಶರ್ಮಾ