Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್: ಭಾರತೀಯ ಮಹಿಳಾ ಬಾಕ್ಸರ್‌ಗಳ ಅಪೂರ್ವ ಸಾಧನೆ

ಏಷ್ಯನ್ ಗೇಮ್ಸ್: ಭಾರತೀಯ ಮಹಿಳಾ ಬಾಕ್ಸರ್‌ಗಳ ಅಪೂರ್ವ ಸಾಧನೆ
ಇಂಚಾನ್‌ , ಭಾನುವಾರ, 28 ಸೆಪ್ಟಂಬರ್ 2014 (10:59 IST)
ಒಲಿಂಪಿಕ್‌ ಬಾಕ್ಸಿಂಗ್‌ ಕಂಚು ವಿಜೇತೆ ಎಂ.ಸಿ. ಮೇರಿ ಕೋಮ್‌ ಅವರು ಕೊರಿಯದ ಕಿಮ್‌ ಯೆಜಿ ಅವರನ್ನು ಸುಲಭವಾಗಿ ಸೋಲಿಸಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಅವರೊಂದಿಗೆ ಇನ್ನಿಬ್ಬರು ಮಹಿಳಾ ಬಾಕ್ಸರ್‌ಗಳು ಕೂಡ ಇದೇ ಸಾಧನೆ ಮಾಡಿದರು.
 
ಎಲ್‌.ಸರಿತಾ ದೇವಿ(60 ಕೆಜಿ) ಮತ್ತು ಪೂಜಾ ರಾಣಿ(75 ಕೆಜಿ) ಅವರು ಅಂತಿಮ ಎಂಟರ ಹಂತಕ್ಕೆ ಪ್ರವೇಶಿಸಿರುವ ಇನ್ನಿಬ್ಬರು ಮಹಿಳಾ ಬಾಕ್ಸರ್‌ಗಳು. ಇದರೊಂದಿಗೆ ಶನಿವಾರ ಸ್ಪರ್ಧಿಸಿದ ಭಾರತದ ಎಲ್ಲ ಮೂವರು ಬಾಕ್ಸರ್‌ಗಳು ಮುನ್ನಡೆ ಸಾಧಿಸಿದಂತಾಗಿದೆ.
 
2010ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದ ಮೇರಿ ಕೋಮ್‌ ಅವರು ಯೆಜಿ ವಿರುದ್ಧ ಬಹುತೇಕ ಪರಿಪೂರ್ಣ ಪ್ರದರ್ಶನ ನೀಡಿದರು. ಪಂದ್ಯದುದ್ದಕ್ಕೂ 31ರ ಹರೆಯದ ಮೇರಿ ಕೋಮ್‌ ಅದ್ಭುತ ಬಾಕ್ಸಿಂಗ್‌ ಕೌಶಲ ಮತ್ತು ದೈಹಿಕ ಕ್ಷಮತೆ ಪ್ರದರ್ಶಿಸಿ ತನ್ನ ನಿಖರ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು ಮತ್ತು 3-0 ಅಂತರದ ವಿಜಯ ಸಾಧಿಸಿದರು. ರವಿವಾರ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಚೀನದ ಸಿ ಹೈಜುವಾನ್‌ ಅವರನ್ನು ಎದುರಿಸಲಿದ್ದಾರೆ.
 
ಅನಂತರ ರಿಂಗ್‌ನಲ್ಲಿ ಕಾಣಿಸಿಕೊಂಡ 32ರ ಹರೆಯದ ಸರಿತಾ ತನ್ನ ಕೌಶಲಪೂರ್ಣ ಹೋರಾಟ ಮೂಲಕ ಆತಿಥೇಯ ರಾಷ್ಟ್ರದ ಚುಂಗ್‌ಸೋನ್‌ ರಿ ಅವರನ್ನು 3-0 ಅಂತರದಿಂದ ಪರಾಭವಗೊಳಿಸಿದರು. ಮಂಗೋಲಿಯದ ಒಯುಗೆರೆಲ್‌ ಸುವದ್‌ ಎರ್ಡೆನೆ ಅವರನ್ನು ಸರಿತಾ ಮುಂದಿನ ಸುತ್ತಿನಲ್ಲಿ ಎದುರಿಸಲಿದ್ದಾರೆ.
 
2012ರ ಏಶ್ಯ ಚಾಂಪಿಯನ್‌ಶಿಪ್‌ನ ಬೆಳ್ಳಿ ವಿಜೇತೆ ಪೂಜಾ ಅವರು ಕೂಡ ಉಜ್ವಲ ಪ್ರದರ್ಶನ ನೀಡಿ ಎದುರಾಳಿ ಮಂಗೋಲಿಯದ ಎರ್ಡೆನೆಸೊಯೊಲ್‌ ಉಂದ್ರಮ್‌ ಅವರನ್ನು 3-0 ಅಂತರದಿಂದ ಮಣಿಸಿದರು.

Share this Story:

Follow Webdunia kannada