Select Your Language

Notifications

webdunia
webdunia
webdunia
webdunia

300ನೇ ಪಂದ್ಯದಲ್ಲಿ 2 ಗೋಲುಗಳನ್ನು ಗಳಿಸಿದ ಕಾಕಾ

300ನೇ ಪಂದ್ಯದಲ್ಲಿ 2 ಗೋಲುಗಳನ್ನು ಗಳಿಸಿದ ಕಾಕಾ
, ಸೋಮವಾರ, 31 ಮಾರ್ಚ್ 2014 (17:13 IST)
PR
ಮಿಲಾನ್ : ಇಟಲಿಯ ಫುಟ್ಬಾಲ್ ಕ್ಲಬ್ ಎಸಿ ಮಿಲಾನ್‌ಗಾಗಿ ಆಡುತ್ತಿರುವ ಬ್ರೆಜಿಲ್‌ ಸ್ಟಾರ್‌ ಕಾಕಾ ರವರು ತಮ್ಮ 300ನೇ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಿದ್ದಾರೆ.

ಕಾಕಾರವರ ಈ ಉತ್ತಮ ಪ್ರದರ್ಶನದಿಂದ ಎಸಿ ಮಿಲಾನ್ ತಂಡ ತನ್ನ ಎದುರಾಳಿ ತಂಡವಾದ ಇಟೆಲಿಯನ್ ಲೀಗನಲ್ಲಿ ಸೆವೊ ತಂಡವನ್ನು 3-0 ಗೋಲುಗಳ ಅಂತರದಿಂದ ಸೋಲಿಸುವಲ್ಲಿ ಸಫಲವಾಗಿದೆ.

ಕಾಕಾರ ಹೊರತು ಪಡಿಸಿ ಮಾರಿಯೋ ಬೋಲೆಟೆಲ್ಲಿ ಕೂಡ ಎಸಿ ಮಿಲಾನ್‌‌ಗಾಗಿ ಆಡಿದ ಈ ಪಂದ್ಯದಲ್ಲಿ ಗೋಲನ್ನು ಗಳಿಸಿದ್ದಾರೆ. ಪಂದ್ಯ ಪ್ರಾರಂಭವಾದ ನಾಲ್ಕೇ ನಿಮಿಷದಲ್ಲಿ ಮಾರಿಯೋ ಗೋಲನ್ನು ಗಳಿಸಿದ್ದಾರೆ. ಇದರ ನಂತರ 27 ನೇ ನಿಮಿಷದಲ್ಲಿ ಕಾಕಾ ತಮ್ಮ ಮೊದಲ ಮತ್ತು ಪಂದ್ಯದ ಎರಡನೇ ಗೋಲನ್ನು ಗಳಿಸಿದ್ದಾರೆ. ಮಧ್ಯಂತರದ ನಂತರ ಕಾಕಾ 9ನೇ ನಿಮಿಷದಲ್ಲಿ ತಮ್ಮ ಎರಡನೇ ಮತ್ತು ಪಂದ್ಯದ ಮೂರನೇ ಗೋಲನ್ನು ಗಳಿಸಿದ್ದಾರೆ .

Share this Story:

Follow Webdunia kannada